ಸೋಮವಾರ, 26 ಅಕ್ಟೋಬರ್ 2026
Trending

ಸಹೋದರ ಸಹೋದರಿಯರ ಗುಟ್ಟಾದ ಅಶ್ಲೀಲ ಸಂಬಂಧ ಸರಿನಾ ತಪ್ಪಾ ? – ಪ್ರಶ್ನಪತ್ರಿಕೆಯಲ್ಲಿ ಮಕ್ಕಳಿಗೆ ಪ್ರಬಂಧ ಬರೆಯಲು ಹೇಳಿದ ವಿಶ್ವವಿದ್ಯಾಲಯ

Contraversial Question Paper : ಈ ಸುದ್ದಿಯನ್ನು ಓದಿದರೆ ನಿಮಗೆ ಹೇಗನ್ನಿಸುತ್ತದೆ ? ಇಂತದ್ದೊಂದು ಪ್ರಶ್ನೆ ಮತ್ತು ಅದರಲ್ಲೇ ಇರುವ ಹಲವು ಉತ್ತರಗಳನ್ನು ವಿಶ್ವವಿದ್ಯಾಯಲಯವೊಂದು ತನ್ನವಿದ್ಯಾರ್ಥಿಗಳಿಗೆ ನೀಡಿದೆ.

Contraversial Question Paper : ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆಯೊಂದರಲ್ಲಿ ಸಹೋದರ ಮತ್ತು ಸಹೋದರಿಯರ ನಡುವಿನ ಸೆಕ್ಸ್ ಬಗ್ಗೆ ಪ್ರಶ್ನೆ ಎತ್ತಿದ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ಕೇಳಿಬಂದಿದೆ. ಏನೀ ಪಾಕ್ ವಿಶ್ವ-ವಿವಾದ ?

Sponsored

ಮಾರ್ಕ್ ಮತ್ತು ಜೂಲಿ ಈ ಇಬ್ಬರು ಅಣ್ಣ ತಂಗಿಯರು. ಒಂದು ದಿನ ಈ ಇಬ್ಬರು ಸೋದರ ಸೋದರಿಯರು ಬೇಸಗೆ ರಜೆಯ ಪ್ರಯುಕ್ತ ಫ್ರಾನ್ಸ್ ನ ಬೀಚ್ ಒಂದರ ಬಳಿ ಪ್ರಯಾಣಿಸುತ್ತಿದ್ದಾಗ ತಂಗಬೇಕಾದ ಪ್ರಸಂಗ ಬಂತು. ಆಗ ತಾವಿಬ್ಬರು ಮಜಾ ಮಾಡಿದರೆ ಹೇಗೆ ಎಂಬ ಆಲೋಚನೆ ಅವರಿಬ್ಬರಿಗೆ ಬಂತು. ಹಾಗಿದ್ದರೆ ಅದು ಇಂಟ್ರೆಸ್ಟಿಂಗ್ ಅಂತ ಅವ್ರಿಗೆ ಅನ್ನಿಸಿತು. ಮುಖ್ಯವಾಗಿ ಅದು ಅವರಿಬ್ಬರಿಗೂ ಹೊಸ ಅನುಭವವಾಗಿತ್ತು. ಜೂಲಿ ಮಕ್ಕಳಾಗದಂತೆ ಬರ್ತ ಕಂಟ್ರೋಲ್ ಪಿಲ್ ಎತ್ತಿಕೊಂಡಳು, ಮಾರ್ಕ್ ಕಾಂಡೋಮ್ ಅನ್ನು ಎಳೆದುಕೊಂಡ. ಹಾಗೆ ಅವರಿಬ್ಬರೂ ಅವತ್ತು ಪ್ರೀತಿಯನ್ನು ಹಂಚಿಕೊಂಡು ಸುಖಿಸಿದರು. ಆದರೆ ಮುಂದೆಂದೂ ಈ ರೀತಿ ಮಾಡಬಾರದೆಂದು ಅವರು ಅಂದುಕೊಂಡರು. ಅವತ್ತಿನ ರಾತ್ರಿಯನ್ನು ಅವರು ವಿಶೇಷವಾಗಿ ಗುಟ್ಟಾಗಿ ಇಟ್ಟುಕೊಂಡರು ಮತ್ತು ಅವತ್ತಿನಿಂದ ಅವರಿಬ್ಬರೂ ಇನ್ನಷ್ಟು ಹತ್ತಿರವಾದರು. ಇದರ ಬಗ್ಗೆ ನೀವೇನಂತೀರಾ ? ಅವರು ಹೀಗೆ ಪ್ರೀತಿ ಮಾಡಿದ್ದೂ ಸರಿ ಅಂತೀರಾ ? ಎಂದು ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆ (Contraversial Question Paper) ಕೇಳಲಾಗಿದೆ.

Advertisement
Advertisement

ಈ ಸುದ್ದಿಯನ್ನು ಓದಿದರೆ ನಿಮಗೆ ಹೇಗನ್ನಿಸುತ್ತದೆ ? ಇಂತದ್ದೊಂದು ಪ್ರಶ್ನೆ ಮತ್ತು ಅದರಲ್ಲೇ ಇರುವ ಹಲವು ಉತ್ತರಗಳನ್ನು ವಿಶ್ವವಿದ್ಯಾಯಲಯವೊಂದು ತನ್ನವಿದ್ಯಾರ್ಥಿಗಳಿಗೆ ನೀಡಿದೆ. ಪ್ರಶ್ನೆಗಳಿಗೆ ಉದಾಹರಣೆ ಸಹಿತ ಕಾರಣ ಕೊಡಿ.ಅಲ್ಲದೆ ನಿಮ್ಮ ನಿಜಜೀವನದಿಂದ ಉದಾಹರಣೆಯನ್ನೂ ಮತ್ತು ಸ್ವಂತ ಅಭಿಪ್ರಾಯವನ್ನು ತಿಳಿಸಿ ಎಂದಿದೆ ಆ ಸಂಸ್ಥೆ. ಆಶ್ಚರ್ಯ ಎಂದರೆ, ಇಂತಹಾ ಪ್ರಶ್ನೆ ಹಾಕಿದ್ದು ಕಟ್ಟರ್ ಅನ್ನಿಸಿಕೊಂಡ ಪಾಕಿಸ್ತಾನದಲ್ಲಿ. ಅಲ್ಲಿನ ವಿಶ್ವವಿದ್ಯಾಯಲಯವೊಂದು ಈ ರೀತಿಯ ಪ್ರಶ್ನೆ ಕೇಳಿ ತೀವ್ರ ಆಕ್ರೋಶಕ್ಕೆ ಕಾರಣ ಆಗಿದೆ.

ಇಸ್ಲಾಮಾಬಾದಿನ ಕಾಮ್ ಸಾಟ್ಸ್ ವಿದ್ಯಾಲಯ ತನ್ನ ಮೊದಲ ವರ್ಷದ ಎಲೆಕ್ಟ್ರಿಕಲ್ ಇಂಜಿಯರಿಂಗ್ ನ ಮೊದಲ ವರ್ಷದ ಪತ್ರಿಕೆಯಲ್ಲಿ ಈ ಅಸಹ್ಯ ಪ್ರಶ್ನೆಯನ್ನೆತ್ತಲಾಗಿದೆ. ಈಗ ಸೆಲೆಬ್ರಿಟಿಗಳು ಈ COSMAT ಎನ್ನುವ ವಿಶ್ವವಿದ್ಯಾಲಯದ ವಿರುದ್ಧ ಗರಂ ಆಗಿದ್ದಾರೆ.

https://twitter.com/mishilicious/status/1627639269740142594?ref_src=twsrc%5Etfw%7Ctwcamp%5Etweetembed%7Ctwterm%5E1627639269740142594%7Ctwgr%5Ec0cb000bc79a4176c9d35db72d0211bb5a316d9a%7Ctwcon%5Es1_&ref_url=https%3A%2F%2Fnewsics.com%2Fnews%2Fworld%2Fcontroversial-brother-and-sister-question-in-pak-university-exam-shocks-internet%2F137451%2F

Advertisement