ಸೋಮವಾರ, 26 ಅಕ್ಟೋಬರ್ 2026
Trending

Congress land scam: ಕಾಂಗ್ರೆಸ್‌ನಿಂದ ಮತ್ತೊಂದು ಭೂಅಕ್ರಮ? ಖರ್ಗೆ ಪುತ್ರನಿಗೂ ಭೂ ಕಂಟಕ!

Congress land scam: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ, ರಾಹುಲ್ ಎಂ.ಖರ್ಗೆ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ಜಾಗದಲ್ಲಿ 5 ಎಕರೆ ಜಮೀನನ್ನು ಸರ್ಕಾರ ನೀಡಿರುವುದು ಬೆಳಕಿಗೆ ಬಂದಿದೆ.

Congress land scam

Congress land scam: ಸಿಎಂ ಸಿದ್ದರಾಮಯ್ಯ(CM Siddaramaiha) ಅವರ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಡಿ(Muda Scam) 14 ಬಿಡಿ ನಿವೇಶನ ಪಡೆದ ಪ್ರಕರಣದ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಪುತ್ರ, ರಾಹುಲ್ ಎಂ.ಖರ್ಗೆ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿ(Industrial Area) ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ಜಾಗದಲ್ಲಿ 5 ಎಕರೆ ಜಮೀನನ್ನು(Land) ಸರ್ಕಾರ(Govt) ನೀಡಿರುವುದು ಬೆಳಕಿಗೆ ಬಂದಿದೆ.

Sponsored

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಹಂಚಿಕೆ ಮಾಡಲಾದ ವಿಸ್ತೀರ್ಣದಲ್ಲಿ ರಾಹುಲ್ ಖರ್ಗೆ ಟ್ರಸ್ಟಿ ಆಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಈ ಜಮೀನು ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ ಕೋಟಾದ ಅಡಿಯಲ್ಲೇ 5 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ವಿಹಾರ ಟ್ರಸ್ಟ್, ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಸಂಸ್ಥೆಗಳ ಸ್ಥಾಪನೆ ಮಾಡಲು ಜಮೀನು ಮಂಜೂರು ಮಾಡುವಂತೆ ಕೋರಿತ್ತು. ಟ್ರಸ್ಟಿ ರಾಹುಲ್ ಖರ್ಗೆ ಅರ್ಜಿ ಹಾಕಿದ ಹಿನ್ನೆಲೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಜಾಗ ಮಂಜೂರು ಮಾಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಎಂ.ಬಿ.ಪಾಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ಗೆ ಏರೋಸ್ಪೇಸ್ ಪಾರ್ಕ್ನಲ್ಲಿ ಸಿಎ ನಿವೇಶನವನ್ನು ಕಾನೂನು ಪ್ರಕಾರವೇ ನಿಗದಿತ ಬೆಲೆಗೆ ಜಮೀನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ನೀಡಿರುವ ಜಾಗದಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕ ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ. ರಾಹುಲ್ ಖರ್ಗೆ ಅವರು ಐಐಟಿ ಪದವೀಧರ ಆಗಿದ್ದು, ಅವರ ಕುಟುಂಬ ಸದಸ್ಯರು ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಏಂ ಬಿ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಕೆಐಎಡಿಬಿ ನಿಯಮಗಳ ಪ್ರಕಾರ ಸಿಎ ನಿವೇಶನಗಳಲ್ಲಿ ಆರ್ ಅಂಡ್ ಡಿ ಕೇಂದ್ರಗಳು, ಉತ್ಕಷ್ಟತಾ ಕೇಂದ್ರಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಪೆಟ್ರೋಲ್‌ಬಂಕ್, ಕ್ಯಾಂಟೀನ್, ಬ್ಯಾಂಕ್, ತಾಂತ್ರಿಕ ಸಂಸ್ಥೆಗಳು, ಆಸ್ಪತ್ರೆ, ಹೋಟೆಲ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ ಎಂದಿದ್ದಾರೆ. ಆಸಕ್ತರು ಯಾರು ಬೇಕಾದರೂ ಈ ಜಮೀನಿಗಾಗಿ ಪ್ರಯತ್ನಿಸಬಹುದು, ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಶಿಫಾರಸಿನ ನಂತರವೇ ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ. ಈ ಹಿಂದೆ ಬಿಜೆಪಿ ಸರ್ಕಾರ, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಬರೀ 50 ಕೋಟಿ ರೂ.ಗೆ ನೀಡಿದೆ. ಇದರಿಂದ 137 ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಬಗ್ಗೆ ಯಾಕೆ ಲೆಹರ್ ಸಿಂಗ್ ಅವರು ಮಾತನಾಡುತ್ತಿಲ್ಲ ಎಂದು
ಪ್ರಶ್ನಿಸಿದ್ದಾರೆ.