ಹೊಸದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗಾಯನದ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಗಾಯನವನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಮಂಗಳೂರಲ್ಲಿ ದೂರು ನೀಡಲಾಗಿದೆ.
Sponsoredಸೋನಿಯಾ ವಂದೇ ಮಾತರಂ ಗೀತೆಗೆ ಅಗೌರವ ತೋರಿದ್ದಾರೆ ಎಂದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ನಾಯಕ ವಿಕಾಸ್ ಪುತ್ತೂರು ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Marriage AdSponsoredಬಳಿಕ ಮಾತನಾಡಿದ ವಿಕಾಸ್ ಪುತ್ತೂರು, ದೂರು ನೀಡಿದ ಬಳಿಕ ವಿಕಾಸ್ ಪುತ್ತೂರು ಮಾತನಾಡಿ, ಇಡೀ ಭಾರತ ದೇಶ 80ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷ 140 ಕೋಟಿ ಜನರಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂಗೆ ಅವಮಾನವಾಗಿದೆ. ಧ್ವಜಾರೋಹಣದ ವೇಳೆ ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ. ವಂದೇ ಮಾತರಂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಕ್ರಾಂತಿಗೀತೆ. ರಾಷ್ಟ್ರ ಗಾನವನ್ನ ಪೂರ್ಣ ಪ್ರಮಾಣದಲ್ಲಿ ಪ್ರಸ್ತುತ ಪಡಿಸಬಾರದು. ಅರ್ಧಕ್ಕೆ ನಿಲ್ಲಿಸಬೇಕು ಎಂದು ಅವರು ಸೂಚನೆ ಕೊಟ್ಟಿದ್ದನ್ನು ಇಡೀ ದೇಶದ ಜನತೆ ನೋಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ರಾಷ್ಟ್ರೀಯ ಚಿಹ್ನೆ, ಸಂಕೇತದ ಘನತೆಗೆ ಅಪಮಾನ ಮಾಡೋದು ಕಾನೂನಿನ ಪ್ರಕಾರ ಅಪರಾಧ. ಜನಗಣಮನದಷ್ಟೇ ವಂದೇ ಮಾತರಂಗೆ ಸ್ಥಾನಮಾನ, ಗೌರವ, ಮಾನ್ಯತೆ ಇದೆ. ಈ ನೆಲೆಯಲ್ಲಿ ಸೋನಿಯಾ ಗಾಂಧಿ ಮೇಲೆ ಕಾನೂನಾತ್ಮಕ ಕ್ರಮ ಆಗಬೇಕು. ಭಾರತೀಯ ನ್ಯಾಯ ಸಂಹಿತೆಯ ಆಧಾರದಲ್ಲಿ ಸೆಕ್ಷನ್‌ಗಳನ್ನು ಹಾಕಬೇಕು. ಉರ್ವಾ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದೇವೆ. ಸೋನಿಯಾ ಗಾಂಧಿ ಮೇಲೆ ಎಫ್‌ಐಆರ್ ಮಾಡದೆ ಹೋದರೆ, ಈ ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಸರ್ಕಾರ ಇದೆ ಎಂದು ಭಾವಿಸಲಾಗುತ್ತೆ ಎಂದು ಎಚ್ಚರಿಸಿದರು.




