ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಹಾಡೊಂದನ್ನು ಎಲ್ಲರೂ ಕೇಳ್ತೀರ. ಈ ದ್ವೇಷ ಸಾಧನೆ ನಿಜವೇನೋ ಅನ್ನುವ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಘಟನೆಯೊಂದು ನಡೆದಿದೆ. ಎರಡು ವರ್ಷಗಳ ಹಿಂದೆ ಬಾಲಕನ ಅಪ್ಪ ಹಾವು ಕಚ್ಚಿ ಸಾವಿಗೀಡಾದ. ಈಗ ಮಗ ಕೂಡಾ ಹಾವು ಕಚ್ಚಿ ಸತ್ತಿದ್ದಾನೆ. ಅಲ್ಲದೇ ಈ ಸಾವು ನಡೆದಿರುವುದು ಕೂಡಾ ಗುರುವಾರ ರಾತ್ರಿಯೇ. ಬನ್ನಿ ಈ ಘಟನೆ ಸಂಪೂರ್ಣ ವಿವರ ಓದೋಣ.
Sponsoredಮಲ್ಕಾಪುರ ರಸ್ತೆಯ ಕಾನ್ಶಿರಾಮ್ ಕಾಲೋನಿಯಲ್ಲಿ, 12 ವರ್ಷದ ಬಾಲಕ ಅಯಾನ್ ಗುರುವಾರ ಬೆಳಿಗ್ಗೆ ಆಟವಾಡ್ತಾ ಹಾವಿನ ಮರಿಯನ್ನು ಕೊಂದಿದ್ದ. ಕೋಲಿನಿಂದ ಹೊಡೆದು ಹಾವಿನ ಮರಿಯನ್ನು ಕಬ್ಬಿನ ಗದ್ದೆಗೆ ಎಸೆದಿದ್ದ. ನಂತರ ಮನೆಗೆ ಬಂದಿದ್ದ.
Marriage AdSponsoredರಾತ್ರಿ ಮನೆಯಲ್ಲಿ ಮಲಗಿದ್ದಾಗ ಅಯಾನ್ ಮೇಲೆ ಹಾವು ದಾಳಿ ಮಾಡಿದೆ. ಹಾವು ಕಚ್ಚಿದ ನೋವಿನಲ್ಲಿ ಬಾಲಕ ಜೋರಾಗಿ ಕೂಗಿದ್ದಾನೆ. ಅಮ್ಮ ಬಂದು ನೋಡಿದಾಗ ಬೆಡ್ ಬಳಿ ಹಾವು ಕಂಡಿದೆ. ಐದರಿಂದ ಆರು ಅಡಿ ಉದ್ದವಿದ್ದ ಹಾವನ್ನು ಅಯಾನ್ ಅಮ್ಮ ನಸ್ರೀನ್ ಕೋಲಿನಿಂದ ಹೊಡೆದು ಸಾಯಿಸಿದ್ದಾಳೆ. ಆದರೆ ಅಯಾನ್‌ಗೆ ಆಗ್ಲೇ ಹಾವು ಕಚ್ಚಿತ್ತು.
ಅಯಾನ್ ಅಜ್ಜ, ಬಾಯಿಂದ ವಿಷ ತೆಗೆಯುವ ಪ್ರಯತ್ನ ಮಾಡಿದ್ದಾರೆ. ನಂತರ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಅಯಾನ್ ಚಿಕಿತ್ಸೆಗೆ ಸ್ಪಂದಿಸದೆ ಅಯಾನ್ ಸಾವಿಗೀಡಾಗಿದ್ದಾನೆ.
ಎರಡು ವರ್ಷಗಳ ಹಿಂದೆ ಅಯಾನ್ ತಂದೆ ಕೂಡಾ ಹಾವು ಕಚ್ಚಿ ಸಾವನ್ನಪ್ಪಿದ್ದ. ಅದು ಗುರುವಾರ ರಾತ್ರಿಯೇ ಅಯಾನ್ ತಂದೆ ಮೇಲೆ ಹಾವು ದಾಳಿ ಮಾಡಿತ್ತು. ಈಗ ಮಗ ಅಯಾನ್ ಮೇಲೆಯೂ ಗುರುವಾರ ದಾಳಿ ಆಗಿದೆ. ಇದು ಕುಟುಂಬದವರನ್ನು ಆತಂಕಕ್ಕೆ ದೂಡಿದೆ.




