ಕೊಪ್ಪಳ: ಗಂಗಾವತಿ ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ.


ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿಯೋರ್ವ ಗಂಗಾವತಿ ಬಸ್ ನಿಲ್ದಾಣದಲ್ಲಿ ಮೊಬೈಲ್‌ನಲ್ಲಿ ಯುವತಿಯರ ಫೋಟೋ ಸೆರೆಹಿಡಿಯುತ್ತಿದ್ದುದ್ದನ್ನು ಗಮನಿಸಿದ ಮಹಿಳೆಯರು ಆತನಿಗೆ ಪ್ರಶ್ನೆ ಮಾಡಿದ್ದಾರೆ. ನಂತರ ಸಾರ್ವಜನಿಕರು ವ್ಯಕ್ತಿಗೆ ಧರ್ಮದೇಟು ನೀಡಿದ್ದಾರೆ.
ನಂತರ ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಮಹಿಳೆಯರ, ವಿದ್ಯಾರ್ಥಿನಿಯರ ಫೋಟೋಗಳು ಪತ್ತೆಯಾಗಿದೆ. ಅಶ್ಲೀಲ ಚಿತ್ರಗಳನ್ನು ತೆಗೆದಿದ್ದಕ್ಕೆ ಸ್ಥಳೀಯರು ವ್ಯಕ್ತಿಯನ್ನು ತೀವ್ರ ತರಾಟೆ ಮಾಡಿದ್ದಾರೆ.