ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದ ಮೆನುವಿನಲ್ಲಿ ಭರ್ಜರಿ ಬದಲಾವಣೆಯನ್ನು ತರಲು ಮುಖ್ಯಮಂತ್ರಿಗಳು ಮುಂದಾಗಿದ್ದು, ಚಿಕನ್ ಬಿರಿಯಾನಿಯನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ಹೌದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಗ್ಗೆ ಊಟದಲ್ಲಿ ಬಿರಿಯಾನಿ ಕೊಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದು ನಮ್ಮ ಕರ್ನಾಟಕ ಸರ್ಕಾರ ಮಾಡಿರುವ ಯೋಜನೆ ಅಲ್ಲ. ಬದಲಿಗೆ ನಮ್ಮ ನೆರೆ ರಾಜ್ಯ ತಮಿಳುನಾಡಲ್ಲಿ ವಿಜಯ್ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗುತ್ತಿದ್ದು, ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಸ್ತಾವನೆ ಕುರಿತು ಮಾತನಾಡಿದ ಶಿಕ್ಷಣ ಸಚಿವ ರಾಜ್ ಮೋಹನ್, ಸರ್ಕಾರದ ಮಹತ್ವದ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗೂ ಚಿಕನ್ ಬಿರಿಯಾನಿ ಸಿಗುತ್ತದೆ. ಹಾಗಾದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುವ ಮುಗ್ಧ ವಿದ್ಯಾರ್ಥಿಗಳಿಗೆ ಆ ಭಾಗ್ಯ ಸಿಗಬಾರದೇ? ನಾವು ತರಲು ಮುಂದಾಗುತ್ತಿರುವ ಈ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಬೆಳೆಯುವ ಮಕ್ಕಳಿಗೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ. ತಮಿಳುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯ ಜೊತೆಗೆ ಪೌಷ್ಟಿಕಾಂಶದ ಕ್ರಾಂತಿಯೂ ಕೈಜೋಡಿಸಿ ಸಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದಿದ್ದಾರೆ.
ಸಸ್ಯಾಹಾರಿ ವಿದ್ಯಾರ್ಥಿಗಳ ಗತಿ ಏನು?
ಮಾಂಸಾಹಾರಿ ಊಟವನ್ನು ಪರಿಚಯಿಸುವಾಗ ಸಸ್ಯಾಹಾರಿ ಮಕ್ಕಳ ಹಿತಾಸಕ್ತಿಗೂ ಸರ್ಕಾರ ಧಕ್ಕೆ ತಂದಿಲ್ಲ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೂ ಸಹ, ಸಸ್ಯಾಹಾರವನ್ನು ಇಷ್ಟಪಡುವ ಮಕ್ಕಳಿಗೆ ಎಂದಿನಂತೆ ಸಸ್ಯಾಹಾರಿ ಊಟವೇ ಸಿಗಲಿದೆ. ಮಾಂಸಾಹಾರ ಸೇವಿಸುವ ವಿದ್ಯಾರ್ಥಿಗಳು ಮಾತ್ರ ಚಿಕನ್ ಬಿರಿಯಾನಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.




