ಭಾನುವಾರ, 25 ಅಕ್ಟೋಬರ್ 2026
Trending

Holiday: ಮಹಾವೀರ ಜಯಂತಿ ಬದಲಾವಣೆ – ಮಾ 31 ಬದಲು, ಈ ದಿನ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

Holiday: ಮಹಾವೀರ ಜಯಂತಿ ರಜೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯನ್ನು ಮಾಡಿದ್ದು ಮಾರ್ಚ್ 31ರ ಬದಲು ಮಾರ್ಚ್ 30ಕ್ಕೆ ಸಾರ್ವಜನಿಕ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ. 

Sponsored

ಯಸ್, ಕ್ಯಾಲೆಂಡರ್ ಪ್ರಕಾರ ಮಾರ್ಚ್ 31, 2026 ರಂದು ನಿಗದಿಯಾಗಿದ್ದ ರಜೆಯನ್ನು ಮಾರ್ಚ್ 30, 2026 ಕ್ಕೆ ಬದಲಾಯಿಸುವಂತೆ ಧಾರ್ಮಿಕ ದತ್ತಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಲ್ಲಿ, ಮಾರ್ಚ್ 31ರ ಬದಲಿಗೆ ಮಾರ್ಚ್ 30ರ ಸೋಮವಾರದಂದು ಸಾರ್ವತ್ರಿಕ ರಜೆ ಜಾರಿಗೆ ಬರಲಿದೆ.

ರಜೆ ಬದಲಿಗೆ ಕಾರಣ?

ಜ್ಯೋತಿಷ್ಯ ಶಾಸ್ತ್ರದ ಅನ್ವಯ: ಜ್ಯೋತಿಷ್ಯ ಶಾಸ್ತ್ರ ಹಾಗೂ ಆಗಮ ಪಂಡಿತರ ಅಭಿಪ್ರಾಯದಂತೆ, ಜೈನ ಸಂಪ್ರದಾಯದಲ್ಲಿ ಸೂರ್ಯೋದಯ ಕಾಲದ ತಿಥಿಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.

ತಿಥಿಯ ಲೆಕ್ಕಾಚಾರ: ಚೈತ್ರ ಶುಕ್ಲ ತ್ರಯೋದಶಿ ತಿಥಿಯು ಮಾರ್ಚ್ 30ರ ಬೆಳಿಗ್ಗೆಯೇ ಪ್ರಾರಂಭವಾಗುತ್ತದೆ. ಜೈನ ಧರ್ಮದ ಪದ್ಧತಿಯಂತೆ ಅಂದು ಮಹಾವೀರ ಜಯಂತಿಯನ್ನು ಆಚರಿಸುವುದು ಹೆಚ್ಚು ಸೂಕ್ತ ಎಂದು ಪಂಡಿತರು ತಿಳಿಸಿದ್ದಾರೆ.

ಸಮುದಾಯದ ಮನವಿ: ಜೈನ ಸಮುದಾಯದ ಮುಖಂಡರು ಹಾಗೂ ಜ್ಯೋತಿಷಿಗಳು ತಮ್ಮ ಸಂಪ್ರದಾಯದಂತೆ ಮಾರ್ಚ್ 30ರಂದೇ ಜಯಂತಿ ಆಚರಿಸುತ್ತಿರುವುದರಿಂದ, ಅಂದೇ ಸರ್ಕಾರಿ ರಜೆ ಘೋಷಿಸಬೇಕೆಂದು ಕೋರಿದ್ದರು.