ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರವು ಶಾಖ ನೀಡಿದು 2000 ಮೊತ್ತಕ್ಕಿಂತ ಹೆಚ್ಚಿನ ಪಾವತಿಗೆ ಶೇಕಡ 0.4 ರಷ್ಟು ಶುಲ್ಕವನ್ನು ವಿಧಿಸಲು ಮುಂದಾಗಿದೆ. ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಸಾಮಾನ್ಯ ಯುಪಿಐ ವಹಿವಾಟುಗಳು ಮೊತ್ತದ ಮಿತಿ ಇಲ್ಲದೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.


ವ್ಯಾಪಾರಿ ಪಾವತಿಗಳಿಗೆ (P2M) ಹೊಸ ನಿಯಮ
ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ (Person-to-Merchant) ವಹಿವಾಟುಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ. ಆದರೆ ಸಣ್ಣ ಮೊತ್ತದ ದಿನನಿತ್ಯದ ಖರೀದಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಸಾಮಾನ್ಯ ಬಳಕೆದಾರರಿಗೆ ಶುಲ್ಕವಿಲ್ಲ
ನೂತನ ನಿಯಮಾವಳಿಗಳ ಅನ್ವಯ, ವ್ಯಕ್ತಿಯಿಂದ ವ್ಯಕ್ತಿಗೆ (P2P – Person to Person) ನಡೆಯುವ ಹಣ ವರ್ಗಾವಣೆಯನ್ನು ಎಂಡಿಆರ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅಂದರೆ, ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಅಥವಾ ಪರಿಚಿತರಿಗೆ ಯಾವುದೇ ಮೊತ್ತದ ಹಣವನ್ನು ಯುಪಿಐ ಮೂಲಕ ಕಳುಹಿಸಿದರೂ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡಲಾಗುವುದಿಲ್ಲ.
₹75,000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕಕ್ಕೆ ಗರಿಷ್ಠ ₹300 ಮಿತಿಯನ್ನು (ಕ್ಯಾಪಿಂಗ್) ನಿಗದಿಪಡಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪಾವತಿಗಳಲ್ಲೂ ಶುಲ್ಕವು ₹300 ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿ ತಿಳಿಸಿದೆ. ಈ ಎಲ್ಲಾ ಹೊಸ ನಿಯಮಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.

