ಹೊರ್ಮುಜ್ ಜಲಸಂಧಿಯಲ್ಲಿ ಮುಳುಗಿದ ನೌಕೆ: ನೀರಲ್ಲಿ ತೇಲಿದ ಬೆಲೆಬಾಳುವ ಐಫೋನ್, ಫರ್ಫ್ಯೂಮ್
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ಹೋರ್ಮುಜ್ ಜಲಸಂಧಿಯಲ್ಲಿ ಸರಕು ಹಡಗೊಂದು ಮುಳುಗಿದ ಪರಿಣಾಮ ಸುಗಂಧ ದ್ರವ್ಯಗಳ ಬಾಟಲಿಗಳು ಸಮುದ್ರದಲ್ಲಿ ತೇಲುತ್ತಿರುವ ದೃಶ್ಯಗಳು ವೈರ್ಲ್ ಆಗಿದೆ.
Sponsoredಜಿಎಎಫ್‌ಎಸ್ ಪ್ರೈಡ್ ಎನ್ನುವ ಕಂಟೈನರ್ ಹಡಗು ಸಿಂಗಾಪುರ ಧ್ವಜ ಹೊಂದಿದ್ದು, ದುಬೈನಿಂದ ಐಫೋನ್ ಮತ್ತು ಇತರ ಸಾಮಾಗ್ರಿ ಹೊತ್ತುಕೊಂಡು ಸಾಗುತ್ತಿತ್ತು. ಎನ್ನಲಾಗಿದೆ. ಹಡಗಿನಲ್ಲಿದ್ದ 2,500 ಕಂಟೈನರ್‌ಗಳ ಪೈಕಿ ಕೆಲವು ಭಾಗಗಳು ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ತೇಲಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಹಡಗು ನೌಕಾ ಮೈನ್‌ಗೆ ಡಿಕ್ಕಿ ಹೊಡೆದು ಮುಳುಗಿದೆ ಎಣದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.




