ಸೋಮವಾರ, 26 ಅಕ್ಟೋಬರ್ 2026
Trending

ಕಾಲೇಜು ಗೆಳೆಯನಿಂದ ಬ್ಲಾಕ್ಮೇಲ್ – ಡೆತ್ ನೋಟ್ ಬರೆದು ಯುವತಿ ಆತ್ಮಹತ್ಯೆ!!

ಕಾಲೇಜು ಸಹಪಾಠಿಯೊಬ್ಬನ ಕಿರುಕುಳದಿಂದ ಬೇಸತ್ತು ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ.

Sponsored

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿ (22) ಮೃತ ಯುವತಿ. ಅಗರದ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಾಗಿದ್ದ ಅವರು, ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಕಿರುಕುಳಕ್ಕೆ ಯುವರಿ ಆತ್ಮಹತ್ಯೆ

ವಾಣಿ ಶ್ರೀ ಈ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ ಅಭಿಷೇಕ್‌ ಎಂಬಾತನ ಪರಿಚಯವಾಗಿತ್ತು. ಪರಸ್ಪರರು ಪ್ರೀತಿ ಮಾಡಿದ್ದರು. ನಂತರ ಅಭಿಷೇಕ್‌ನಿಂದ ದೂರವಾಗಿದ್ದ ವಾಣಿಶ್ರೀ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆ ನಂತರವೂ ಅಭಿಷೇಕ್‌, ಶಿವಮೊಗ್ಗದಿಂದಲೇ ಆಗಾಗ್ಗೆ ವಾಣಿಶ್ರೀಗೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಭಿಷೇಕ್‌ನ ಕಿರುಕುಳದಿಂದ ಮನನೊಂದಿದ್ದ ವಾಣಿಶ್ರೀ, ಶನಿವಾರ(ಆ.22) ಬೆಳಗ್ಗೆ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿಷೇಕ್‌ನ ಕಿರುಕುಳದಿಂದ ನೊಂದು ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಅಭಿಷೇಕ್‌ನೇ ಕಾರಣ ಎಂದು ವಾಣಿಶ್ರೀ ಅವರ ಅಕ್ಕ ಪೂಜಾ ದೂರು ಕೊಟ್ಟಿದ್ದಾರೆ. 

ಡೆತ್ ನೋಟ್‌ನಲ್ಲಿ ಅಭಿಷೇಕ್ ವಾಟ್ಸ್‌ಆಯಪ್ ಮೂಲಕ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅಲ್ಲದೆ, ತಾನು ಕರೆದಾಗಲೆಲ್ಲ ರೂಮ್‌ಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದ, ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ವಾಣಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

”ಅಭಿಷೇಕ್‌ನಿಂದ ಆಗುತ್ತಿರುವ ಮಾನಸಿಕ ಕಿರುಕುಳವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತೀವ್ರ ಖಿನ್ನತೆ ಮತ್ತು ಆಘಾತಕ್ಕೆ ಒಳಗಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ಸಹಪಾಠಿ ಅಭಿಷೇಕ್‌ ಕಾರಣ. ಅವನಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಕುಟುಂಬದವರನ್ನು ತುಂಬಾ ಪ್ರೀತಿಸುತ್ತೇನೆ, ಅವರನ್ನು ಮರೆಯಲು ಸಾಧ್ಯವಿಲ್ಲ,” ಎಂದು ವಾಣಿಶ್ರೀ ಪತ್ರದಲ್ಲಿ ತಿಳಿಸಿದ್ದಾರೆ.