ಗುರುವಾರ, 29 ಅಕ್ಟೋಬರ್ 2026
Trending

ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯ ಕೂರಿಸಿ ‘ಪಪ್ಪಿ ಜಪ್ಪಿ’ ಮಾಡಿದ ಜೋಡಿ| ಪ್ರೇಮಿ ಮೇಲೆ ಕೇಸ್ ಜಡಿದ ಪೊಲೀಸರು!!!

Advertisement
Advertisement

ಚಾಮರಾಜನಗರ: ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತ ಪಪ್ಪಿ ಜಪ್ಪಿ ಮಾಡಿದ್ದ ಪ್ರೇಮಿಯ ಮೇಲೆ ಮೂರು ಕೇಸ್‌ಗಳು ಬಿದ್ದಿವೆ. ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Sponsored

ಪ್ರೇಮಿಯೊಬ್ಬ ಬೈಕ್ ಟ್ಯಾಂಕ್ ಮೇಲೆ ತನ್ನ ಪ್ರೇಯಸಿಯನ್ನು ಕೂರಿಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಹಾಡಹಗಲೇ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಅಪಾಯಕಾರಿಯಾಗಿ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ
ವ್ಯಕ್ತಪಡಿಸಿದ್ದರು.

Advertisement
Advertisement
ಸ್ವಾಮಿ

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಮೋಟಾರು ನಿಯಮ ಕಾಯ್ದೆಯಡಿ ಹೆಚ್.ಡಿ.ಕೋಟೆಯ ಶಿವಪುರ ಗ್ರಾಮದ ಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಒಪ್ಪಿಕೊಂಡಿದ್ದು, ಅಜಾಗರೂಕತೆಯ ಚಾಲನೆ, ಹೆಲ್ಮಟ್ ರಹಿತ ಚಾಲನೆ ಹಾಗೂ ಅಪಾಯಕಾರಿ ಚಾಲನೆ ಎಂಬುದಾಗಿ ಮೂರು ಕೇಸ್‌ಗಳನ್ನು ದಾಖಲಿಸಿದ್ದಾರೆ.

Advertisement
Advertisement
Advertisement