ಶನಿವಾರ, 24 ಅಕ್ಟೋಬರ್ 2026

Bharata: ರಷ್ಯಾದಿಂದ ತೈಲ ಖರೀದಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ – ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು

Bharata: ರಷ್ಯಾದೊಂದಿಗೆ ಭಾರತವು ತೈಲ ಖರೀದಿಸಲು 30 ದಿನಗಳ ರವರೆಗೆ ರಿಯಾಯಿತಿಯನ್ನು ನೀಡಲಾಗುವುದು ಎಂದು ಅಮೆರಿಕ ಘೋಷಣೆ ಮಾಡಿದ ಬೆನ್ನಲ್ಲೇ ಭಾರತವು ಇದಕ್ಕೆ ಖಡಕ್ ತಿರುಗೇಟು ನೀಡಿದ್ದು ‘ರಷ್ಯಾದಿಂದ ತೈಲ ಖರೀದಿಸಲು ನಮಗೆ ಯಾವ ದೊಣ್ಣೆನಾಯಕನ ಅಪ್ಪಣೆಯು ಬೇಡ’ ಎಂದು ಹೇಳಿದೆ.

ಯಸ್, ‘ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಯಾವುದೇ ದೇಶದ ಅನುಮತಿ ಬೇಕಿಲ್ಲ. ರಷ್ಯಾದಿಂದ ಭಾರತದ ಕಚ್ಚಾ ತೈಲ ಖರೀದಿ ಅಬಾಧಿತವಾಗಿ ಮುಂದುವರಿದಿದೆ’ ಎಂದು ಸರ್ಕಾರದ ಮೂಲಗಳು ಶನಿವಾರ ತಿಳಿಸಿವೆ. ಅಲ್ಲದೆ ಭಾರತ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುವ ಯಾವುದೇ ಮೂಲದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣದಿಂದಾಗಿ ವಿನಾಯಿತಿ ನೀಡಲಾಗಿದೆ ಎಂಬ ಅಮೆರಿಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ ಅಂತಹ ಖರೀದಿಗಳನ್ನು ಮಾಡಲು ನವದೆಹಲಿ ಯಾವುದೇ ದೇಶದಿಂದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

ಅಲ್ಲದೆ ಭಾರತ ಫೆಬ್ರವರಿ 2026 ರಲ್ಲೂ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು, ಮತ್ತು ರಷ್ಯಾ ಇನ್ನೂ ಭಾರತದ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶವಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಮೂರು ವರ್ಷಗಳ ಕಾಲ, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದ ಆಕ್ಷೇಪಣೆಗಳ ಹೊರತಾಗಿಯೂ ಭಾರತ ರಷ್ಯಾದ ತೈಲವನ್ನು ಖರೀದಿಸುತ್ತಲೇ ಇತ್ತು. ರಿಯಾಯಿತಿ ಬೆಲೆಗಳು ಮತ್ತು ಸಂಸ್ಕರಣಾಗಾರದ ಬೇಡಿಕೆಯಿಂದಾಗಿ 2022 ರ ನಂತರ ಆಮದು ಗಮನಾರ್ಹವಾಗಿ ಹೆಚ್ಚಾಗಿದೆ.” ಎಂದು ಕೇಂದ್ರ ಸರ್ಕಾರ ಹೇಳಿದೆ.