ಬಂದಾರು: ಗ್ರಾಮ ಪೆರ್ಲ-ಬೈಪಾಡಿ ಅಡೆಂಕಿರಿಮಜಲು ಸೇಸಪ್ಪ ಗೌಡರ ದನದ ಹಟ್ಟಿಯಲ್ಲಿ ಜು.19 ರಂದು ಮುಂಜಾನೆ ಸರಿ ಸುಮಾರು 2.30 ಗಂಟೆಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಕುರಿತು ವರದಿಯಾಗಿದೆ.
ಹಲವಾರು ದಿನಗಳಿಂದ ಕಾಡಂಡ, ಬೈಪಾಡಿ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ನಾಗರಿಕರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಅರಣ್ಯ ಇಲಾಖೆಯವರು ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಒತ್ತಾಯಿಸಿದ್ದಾರೆ.



