ಶನಿವಾರ, 24 ಅಕ್ಟೋಬರ್ 2026

ಸಚಿವ ಬಿ. ನಾಗೇಂದ್ರಗೆ ಮತ್ತೊಂದು ರಿಲೀಫ್; ರಾಜ್ಯದ ಹೊರಗೆ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

Valmiki Corporation Scam

ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಹೈಕೋರ್ಟ್‌ ಮಹತ್ವದ ರಿಲೀಫ್ ನೀಡಿದೆ. ಜಾಮೀನು ವೇಳೆ ವಿಧಿಸಲಾಗಿದ್ದ ರಾಜ್ಯದ ಹೊರಗೆ ಪ್ರಯಾಣಿಸುವ ನಿರ್ಬಂಧವನ್ನು ನ್ಯಾಯಾಲಯ ತೆರವುಗೊಳಿಸಿದೆ.

ನಕಲಿ ಔಷಧ ದಂಧೆ ಸುಳಿವು ನೀಡಿದವರಿಗೆ 50 ಸಾವಿರ ರೂ.ವರೆಗೆ ಬಹುಮಾನ

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ. ಸಚಿವ ಸ್ಥಾನದಲ್ಲಿರುವ ಹಿನ್ನೆಲೆಯಲ್ಲಿ ಅಧಿಕೃತ ಕೆಲಸಗಳಿಗಾಗಿ ಹೊರರಾಜ್ಯಗಳಿಗೆ ತೆರಳುವ ಅಗತ್ಯವಿರುವುದನ್ನು ಪರಿಗಣಿಸಿ, ಪ್ರತಿ ಬಾರಿ ನ್ಯಾಯಾಲಯದ ಅನುಮತಿ ಪಡೆಯಬೇಕೆಂಬ ಷರತ್ತನ್ನು ರದ್ದುಪಡಿಸಲಾಗಿದೆ.

ನಕಲಿ ಔಷಧ ದಂಧೆ ಸುಳಿವು ನೀಡಿದವರಿಗೆ 50 ಸಾವಿರ ರೂ.ವರೆಗೆ ಬಹುಮಾನ

ವಿಚಾರಣೆ ವೇಳೆ ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ಅವರು ಷರತ್ತು ಮುಂದುವರಿಸುವಂತೆ ಮನವಿ ಮಾಡಿದರು. ಆದರೆ ನ್ಯಾಯಾಲಯ ರಾಜ್ಯದ ಹೊರಗಿನ ಪ್ರಯಾಣಕ್ಕೆ ಇದ್ದ ನಿರ್ಬಂಧವನ್ನು ಸಡಿಲಿಸಿದೆ. ಇದೇ ವೇಳೆ, ದೇಶದ ಹೊರಗೆ ಪ್ರಯಾಣಿಸಲು ನ್ಯಾಯಾಲಯದ ಅನುಮತಿ ಅಗತ್ಯ ಎಂದು ಸ್ಪಷ್ಟಪಡಿಸಿದೆ.