ಶನಿವಾರ, 7 ನವೆಂಬರ್ 2026

Bandaru: ಎ 9ರಿಂದ ಬಂದಾರು ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ – ಕಟೀಲು ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Advertisement
Advertisement

Bandaru: ಎ 09 ಬಂದಾರು ಗ್ರಾಮ -ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ  ಶ್ರೀ  ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಕುರಾಯ-ಬಂದಾರು ಇದರ ವತಿಯಿಂದ ಕಟೀಲು ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Sponsored

Advertisement
Advertisement

ಎ 09 ಬಂದಾರು ಗ್ರಾಮ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊoದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಗಳ  ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಎಪ್ರಿಲ್ 09 ರಂದು  ಬೆಳಗ್ಗೆ ಗಣಹವನ, ಕವಟೋದ್ಘಾಟನೆ, ಕಟೀಲು ಮೇಳದ ದೇವರ ಮಹಾಪೂಜೆ, ಶ್ರೀ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸoತರ್ಪಣೆ, ಸಂಜೆ ಪಿಲಿಚಾಮುಂಡಿ ದೈವದ ನೇಮೋತ್ಸವ, ಶ್ರೀ ದೇವರ ಆರಾಟೋತ್ಸವ,ಅವಭ್ರತ ಸ್ನಾನ, ಧ್ವಜಾ ಅವರೋಹಣ, ಭಜನೆ, ಚೌಕಿ ಪೂಜೆ, ರಾತ್ರಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಕುರಾಯ ಬಂದಾರು ಇದರ ವತಿಯಿಂದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣನವರ ಆಶೀರ್ವಾದಗಳೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ಗಣ್ಯರು ,ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ , ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು,ಅರ್ಚಕರು,, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Advertisement

Advertisement
Advertisement