ಶನಿವಾರ, 24 ಅಕ್ಟೋಬರ್ 2026

‘ಟಾಕ್ಸಿಕ್’ ಬಳಿಕ ಯಶ್ ನೆಕ್ಸ್ಟ್ ಮೂವಿ ರಿವೀಲ್!!

ನಟ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ‘ಟಾಕ್ಸಿಕ್’ ಬಳಿಕ ಯಶ್ ಅವರಿಗಾಗಿ ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್. ಮಿತ್ರನ್ ಹೊಸ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ.

ಯಶ್ ಅವರ ಮಾಸ್ ಇಮೇಜ್‌ಗೆ ಹೊಂದುವ ರೀತಿಯಲ್ಲಿ ಕಥೆಯನ್ನು ರೂಪಿಸಲಾಗಿದ್ದು, ಇಬ್ಬರ ಕಾಂಬಿನೇಷನ್‌ನಲ್ಲಿ ದೊಡ್ಡ ಮಟ್ಟದ ಆಯಕ್ಷನ್ ಥ್ರಿಲ್ಲರ್ ಸಿನಿಮಾ ಮೂಡಿಬರುವ ಸಾಧ್ಯತೆ ಇದೆ. ಆದರೆ ಈ ಸಿನಿಮಾ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.

‘ಟಾಕ್ಸಿಕ್’ ನಂತರ ಯಶ್ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಪಿ.ಎಸ್. ಮಿತ್ರನ್ ಅವರ ಹೇಳಿಕೆ ಹೊಸ ಕುತೂಹಲ ಮೂಡಿಸಿದೆ. ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಈ ಹೊಸ ಕಾಂಬಿನೇಷನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.