ಶನಿವಾರ, 24 ಅಕ್ಟೋಬರ್ 2026

ನಟ ಚೇತನ್ ಅಹಿಂಸ ಬಂಧನ: ಪೊಲೀಸ್ ವಶದಲ್ಲಿರೋ ನಟ

ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ ಅಹಿಂಸಾ ಕಾಣೆಯಾಗಿದ್ದಾರೆ ಎನ್ನಲಾಗಿದೆ ಎಂದು ನಟ ಚೇತನ್ ಹೆಂಡತಿ ಮೇಘನಾ ಖುದ್ದು ಫೇಸ್ ಬುಕ್ ಲೈವ್ ಬಂದು ಶೇಷಾದ್ರಿಪುರಂ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಶೇಷಾದ್ರಿಪುರಂ ಪೊಲೀಸ್ ವಶದಲ್ಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದಾದ ಕೆಲವೇ ಹೊತ್ತಲ್ಲಿ ಹಿಜಾಬ್ ಕುರಿತ ಹೇಳಿಕೆ. ಹಿಜಾಬ್ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ನಟ ಚೇತನ್ ಅವರು ಫೆ.16 ರಂದು ಈ ಬಗ್ಗೆ ಒಂದು ಟ್ವೀಟ್ ಮಾಡಿ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ನಿಂದಿಸಿದ್ದರು. ಹಳೆಯ ಟ್ವೀಟ್ ನ್ನು ರೀಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದರು. ಹಿಜಾಬ್ ವಿಚಾರ ವಿಚಾರಣೆ ಹಂತದಲ್ಲಿ ಇರುವ ಕಾರಣ ಜಡ್ಜ್ ಅವರನ್ನು ನಿಂದಿಸುವುದು ಅಪರಾಧ. ಈ ಕಾರಣಕ್ಕಾಗಿ ಪೊಲೀಸರು ಚೇತನ್ ನನ್ನು ವಶಪಡಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ