ಶನಿವಾರ, 24 ಅಕ್ಟೋಬರ್ 2026

ಪ್ರಧಾನಿ ಮೋದಿ ಚರ್ಮದ ಬಣ್ಣ ನಿಂದಿಸಿದ ಜಿರಳೆ ನಾಯಕ ಅಭಿಜಿತ್ ದಿಪ್ಕೆ- ಸಿಡಿದೆದ್ದ ದೇಶದ ಜನ!!

ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕ-2026ಕ್ಕೆ ಸಂಸತ್‌ ಅನುಮೋದನೆ ಸಿಕ್ಕ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ 4ನೇ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಮುಖ್ಯಸ್ಥ ಅಭಿಜೀತ್ ದಿಪ್ಕೆ, “ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖದ ಚರ್ಮವೇ ಹೆಚ್ಚು ಗ್ಲೋ ಆಗುತ್ತಿದೆ” ಎಂದು ಪಿಎಂ ಮೋದಿಯವರನ್ನು ಲೇವಡಿ ಮಾಡಿದ್ದಾರೆ. ದೀಪ್ಕೆ ಈ ಟೀಕೆಗೆ ದೇಶದ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ವಿಡಿಯೋಗೆ ಆಕ್ಷೇಪ

ಹೊಸ ಕಾನೂನಿನಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಧಾನಿ ತಮ್ಮ ವಿಡಿಯೋದಲ್ಲಿ ಹೇಳಿದ್ದರು. ಇನ್ನು ಮೋದಿ ವಿಡಿಯೋಗೆ ಅಭಿಜೀತ್ ದಿಪ್ಕೆ ತೀರಾ ಬಾಲಿಶವಾಗಿ ನಡೆದುಕೊಂಡಿರುವುದು ಈಗ ತೀವ್ರ ಖಂಡನೆಗೆ ಒಳಗಾಗಿದೆ. 

ಪ್ರಧಾನಿ ಮೋದಿಯವರ ವಿಡಿಯೋಗೆ ಪ್ರತಿಕ್ರಿಯಿಸಿರುವ ಅವರು, ವಿಷಯಾಧಾರಿತ ವಿಮರ್ಶೆ ಅಥವಾ ಬೌದ್ಧಿಕ ವಾದ ಮಂಡಿಸುವ ಬದಲು, ತೀರ ಕೆಳಮಟ್ಟದ ಟ್ರೋಲರ್‌ನಂತೆ ವರ್ತಿಸಿದ್ದಾರೆ. “ದೇಶದ ನಾಳೆಗಳಿಗಿಂತ ನಿಮ್ಮ ಚರ್ಮವೇ ಹೆಚ್ಚು ಹೊಳಪಿನಿಂದ ಕೂಡಿದೆ” ಎಂದು ಪ್ರಧಾನಿಯವರ ವೈಯಕ್ತಿಕ ಸೌಂದರ್ಯದ ಬಗ್ಗೆ ಲೇವಡಿ ಮಾಡಿರುವುದು ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.