ಶನಿವಾರ, 7 ನವೆಂಬರ್ 2026

ಮನೆ ಕೆಲಸದಾಕೆ ಶಾಸಕಿಯಾಗಿ ಆಯ್ಕೆ !!

Advertisement
Advertisement

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ಜನತಾ ಪಾರ್ಟಿ (BJP) ಕಮಾಲ್​ ಮಾಡಿದೆ. ಸತತ 15 ವರ್ಷಗಳ ಮಮತಾ ಬ್ಯಾನರ್ಜಿ (Mamatha Banerjee) ಆಡಳಿತ ಯುಗ ಅಂತ್ಯ ಕಂಡಿದೆ. ಈ ಚುನಾವಣೆಯಲ್ಲಿ ಹಲವು ವಿಶೇಷ ವ್ಯಕ್ತಿಗಳು ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿರುವುದನ್ನು ಕೂಡ ಕಾಣಬಹುದು. ಅಂತೆಯೇ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ ಈಗ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ

Sponsored

ಹೌದು, ಕಲಿತಾ ಮಾಝಿ (Kalita Majhi) ಎಂಬ ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದು ಮ್ಯಾಜಿಕ್​ ಮಾಡಿದ್ದಾರೆ. ಆಸ್ಗ್ರಾಮ ವಿಧಾನಸಭಾ ಕ್ಷೇತ್ರದಿಂದ (Asgram Assembly Constituency) ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಲಿತಾ ಮಾಝಿ ಅವರು ಟಿಎಂಸಿ (All India Trinamool Congress) ಪಕ್ಷದ ಕ್ಯಾಂಡಿಡೇಟ್​​ ಶ್ಯಾಮ್​ ಪ್ರಸನ್ನ ಲೋಹರ್​ ವಿರುದ್ಧ ಗೆದ್ದು ಬೀಗಿದ್ದಾರೆ. ಅವರು 12,535 ಮತಗಳ ಭಾರಿ ಅಂತರದಿಂದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

Advertisement
Advertisement

ಬೂತ್ ಮಟ್ಟದ ಕಾರ್ಯಕರ್ತರಾಗಿ ರಾಜಕೀಯ ಜೀವನವನ್ನು ಆರಂಭಿಸಿದ್ದ ಅವರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಒಂದು ಕಾಲದಲ್ಲಿ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಲಿತಾ ಮಾಝಿ ಇದೀಗ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ.

Advertisement
Advertisement
Advertisement