ಭಾನುವಾರ, 25 ಅಕ್ಟೋಬರ್ 2026

ಕರಾವಳಿಯ ಭವಿಷ್ಯ ಬರೆದ ‘ಮಂಗಳೂರು ಸಂಪುಟ ಸಭೆ’ – 11 ನಿರ್ಣಯಗಳಿಗೆ ‘ಜೈ’ ಎಂದ ಸರ್ಕಾರ

ಇದೇ ಮೊದಲ ಬಾರಿಗೆ ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ಶುಕ್ರವಾರ (ಸೆ.18) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 

Sponsored

 ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳು ಇಡೀ ಕರಾವಳಿಯ ಭವಿಷ್ಯವನ್ನೇ ಬದಲಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕಂದ್ರೆ ಈ ಸಭೆಯಲ್ಲಿ ಒಟ್ಟು ₹32,611 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ 11 ಪ್ರಮುಖ ನಿರ್ಣಯಗಳಿಗೆ ಸರ್ಕಾರ ಜೈ ಎಂದಿದೆ. ಹಾಗಿದ್ರೆ ಆ ನಿರ್ಣಯಗಳು ಯಾವುವು? ಇದರಿಂದ ಕರಾವಳಿಯ ಜನತೆಗೆ ಏನಿಲ್ಲ ಸಿಗಲಿದೆ? ಎಂದು ನೋಡೋಣ ಬನ್ನಿ.

Marriage AdMarriage AdSponsored

ಏನೆಲ್ಲಾ ಸಿಗಲಿದೆ?

1. 500 ಕೋಟಿ ರು. ವೆಚ್ಚದಲ್ಲಿ ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ ಅನುಷ್ಠಾನ

2. ಮಂಗಳೂರು ಬಳಿಯ ಗುರುಪುರದಲ್ಲಿ 125 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ಪ್ರವಾಸಿ ನಗರ

3. ಮಂಗಳೂರು ಸಮೀಪ ‘ಮರೈನ್ ಬ್ಲೂ ಎಕಾನಮಿ’ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ

4. ಪುತ್ತೂರಿನಲ್ಲಿ 549 ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಪ್ರಾರಂಭ

5. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ 12 ದ್ವೀಪಗಳು ಜಾಗತಿಕ ಪ್ರವಾಸಿ ತಾಣ

6. ಮಂಗಳೂರಿನ ಲೈಟ್‌ ಹೌಸ್‌ ಸುತ್ತ 1.5 ಎಕರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

7. ಮಂಗಳೂರಿನ ಕೋಡಿಕಲ್‌ನಲ್ಲಿ ರಿವರ್‌ಫ್ರಂಟ್ ವೆಲ್‌ನೆಸ್‌ ರೆಸಾರ್ಟ್‌ ಸ್ಥಾಪನೆ

8. ಸುರತ್ಕಲ್‌ ಬಳಿ ತಿರುಪತಿ ವೆಂಕಟೇಶ್ವರ ದೇಗುಲ, ಕಲ್ಯಾಣ ಮಂಟಪ

9. ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ವೆಚ್ಚದ 98 ಕೋಟಿ ರು.ನಿಂದ 250 ಕೋಟಿ ರು.ಗೆ

10. ಗುರುಪುರ- ನೇತ್ರಾವತಿ ನದಿಗಳಲ್ಲಿ ಮಂಗಳೂರು ಜಲ ಮೆಟ್ರೋ ಯೋಜನೆ ಜಾರಿ

11. ಮಂಗಳೂರಲ್ಲಿ ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು 400 ಕೋಟಿ ರೂ 

ಕರಾವಳಿಗೆ ಬಂಪರ್ ಗಿಫ್ಟ್:

1. ತುಳುವಿಗೆ 2ನೇ ರಾಜ್ಯಭಾಷೆ ಸ್ಥಾನಮಾನ ನೀಡಿಕೆ.

2. ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವ ಸಂಬಂಧ ಸಾರ್ವಜನಿಕರಿಂದ ಒಂದು ತಿಂಗಳ ಕಾಲ ಅಭಿಪ್ರಾಯ ಸಂಗ್ರಹಿಸಲು ಕರಡು ಅಧಿಸೂಚನೆ ಹೊರಡಿಸಲು ನಿರ್ಧಾರ.

3. ಸುರತ್ಕಲ್‌ ಸಮೀಪದ ಬಡಗ ಎಕ್ಕಾರಿನಲ್ಲಿ ದೇವಾಲಯ ನಿರ್ಮಾಣಕ್ಕೆ 10 ಎಕರೆ ಭೂಮಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಗೆ ಮಂಜೂರು.

4. ಮಂಗಳೂರಿನ ಎಕ್ಕೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣ.

5. 500 ಕೋಟಿ ರು. ವೆಚ್ಚದ ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ -2026 ಘೋಷಣೆ.

6. ಕರಾವಳಿ ಅಭಿವೃದ್ಧಿಗೆ ₹32,611 ಕೋಟಿ ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ. ಈ ಪೈಕಿ, ಗ್ರಾಮೀಣಾಭಿವೃದ್ಧಿಗೆ ₹16,000 ಕೋಟಿ ಮೀಸಲು.