ಸೋಮವಾರ, 26 ಅಕ್ಟೋಬರ್ 2026
Trending

ಜಿರಳೆ ಪಕ್ಷಕ್ಕೆ 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು – ಕಪಿಲ್‌ ಸಿಬಲ್ ಘೋಷಣೆ!!

CJP ಪಕ್ಷಕ್ಕೆ ಕಾನೂನು ಬೆಂಬಲ ನೀಡುತ್ತೇನೆ ಮತ್ತು ಕಾನೂನು ಹೋರಾಟದ ನಿಧಿಗಾಗಿ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಘೋಷಿಸಿದ್ದಾರೆ.

Sponsored

ಸಿಜೆಪಿ ವಕ್ತಾರ ಸೌರವ್ ದಾಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುವುದನ್ನು ತಡೆಯಲು ಮತ್ತು ಅವರಿಗೆ ಅಗತ್ಯ ಕಾನೂನು ನೆರವು ನೀಡುವುದಾಗಿ ಹೇಳಿದ್ದಾರೆ. 

Advertisement
Advertisement

ಪ್ರತಿಭಟನಾಕಾರರ ಮೇಲೆ ಎಲ್ಲಿ, ಏನು ಕ್ರಮ ಜರುಗಿಸಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು ಸಿಜೆಪಿ ಒಂದು ಬಲವಾದ ಚೌಕಟ್ಟನ್ನು ರೂಪಿಸಲಿದೆ. ಉಚಿತವಾಗಿ ಕಾನೂನು ನೆರವು ನೀಡಲು ಬಯಸುವ ವಕೀಲರು ತಮ್ಮ ಹೆಸರು, ಸ್ಥಳ ಹಾಗೂ ಸಹಾಯದ ವಿವರಗಳನ್ನು ನೋಂದಾಯಿಸಿಕೊಳ್ಳಲು ಪ್ರತ್ಯೇಕ ವೆಬ್‌ಸೈಟ್ ತೆರೆಯಲಾಗುವುದು. ಎಲ್ಲೆಲ್ಲಿ ಕಾನೂನನ್ನು ದುರುಪಯೋಗಪಡಿಸಿಕೊಂಡು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಲಾಗುತ್ತದೆಯೋ, ಅಲ್ಲೆಲ್ಲಾ ನಾವು ಅವರ ಪರವಾಗಿ ನಿಲ್ಲುತ್ತೇವೆ. ದೇಶಾದ್ಯಂತ ನಮ್ಮ ವಕೀಲರು ಅವರಿಗೆ ಬೆಂಬಲ ನೀಡಲಿದ್ದಾರೆ. ನಾನು ಈ ನಿಧಿಗೆ 1 ಕೋಟಿ ರೂಪಾಯಿ ನೀಡುತ್ತಿದ್ದು, ದೇಶದ ಇತರ ವಕೀಲರು ಹಾಗೂ ಸಾರ್ವಜನಿಕರು ಸಹ ದೇಣಿಗೆ ನೀಡಬೇಕಾಗಿ ವಿನಂತಿಸುತ್ತೇನೆ ಎಂದು ಕಪಿಲ್ ಸಿಬಲ್ ಮನವಿ ಮಾಡಿದರು.

Advertisement