ಶನಿವಾರ, 24 ಅಕ್ಟೋಬರ್ 2026

Shabarimale : ಶಬರಿಮಲೆ ದೇವಸ್ಥಾನಕ್ಕೆ ಯಾವ ಕಾರಣಕ್ಕೂ ಮಹಿಳೆಯರಿಗೆ ಪ್ರವೇಶ ನೀಡಲ್ಲ – ದೇವಾಲಯ ಮಂಡಳಿ ನಿರ್ಣಯ

Shabarimale: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.

ಈ ಬಗ್ಗೆ ಟಿಬಿಟಿ ಅಧ್ಯಕ್ಷ ಕೆ.ಜಯಕುಮಾರ್ ಮಾತನಾಡಿ, ಗರ್ಭ ಧರಿಸುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್‌ (Supreme Court) 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು.

ಋತುಸ್ರಾವ ಆಗುವ ವಯಸ್ಸಿನ ಮಹಿಳೆಯರಿಗೆ ಕೂಡ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೊಳಿಸುವುದಾಗಿ ಆಡಳಿತಾರೂಢ ಎಲ್‌ಡಿಎಫ್‌ ಸರ್ಕಾರ ಹಾಗೂ ಟಿಡಿಬಿ ತಿಳಿಸಿದ್ದವು. ಈ ನಿರ್ಧಾರವು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಹಿಂಸಾತ್ಮಕ ಪ್ರತಿಭಟನೆಗೂ ಕಾರಣವಾಗಿತ್ತು.

10ರಿಂದ 50 ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರಿಸಬೇಕು ಎಂದು ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮಂಡಳಿಯು ತನ್ನ ಈ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಿದೆ’ ಎಂದು ಹೇಳಿದ್ದಾರೆ.