ಶುಕ್ರವಾರ, 6 ನವೆಂಬರ್ 2026

ದೀಪಾವಳಿ ಸಂಭ್ರಮಕ್ಕೆ ಸ್ಪೆಷಲ್ ಕೊಡುಗೆ: ನೂರೇ ರೂಪಾಯಿಗೆ ಕೈಗೆಟುಕುವ ದರದಲ್ಲಿ ತರಕಾರಿ ಭಾಗ್ಯ!

Thalapathy Vijay
Advertisement
Advertisement

ತಮಿಳುನಾಡು ಸರ್ಕಾರವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಬಿಡುಗಡೆ ನೀಡುವ ಸಲುವಾಗಿ ‘ವೆಟ್ರಿ-ವಿಜಯಿ/ಗೆಲುವು) ಹೆಸರಿನಲ್ಲಿ ಒಂದು ವಿಶೇಷ ಹಾಗೂ ಜನಪರ ತರಕಾರಿ ಪ್ಯಾಕ್ ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ರೂ. 100 ಕ್ಕೆ ಸುಮಾರು 2.6 ಕೆಜಿ ತೂಕದ 10 ಪ್ರಮುಖ ತರಕಾರಿಗಳನ್ನು ಒಳಗೊಂಡ ಈ ಕಿಟ್ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.
​
ನವೆಂಬರ್ 5 ರಿಂದ ನವೆಂಬರ್ 7 ರವರೆಗೆ (ಮೂರು ದಿನಗಳ ವಿಶೇಷ ಮಾರಾಟ).ತಮಿಳುನಾಡಿನಾದ್ಯಂತ ಆಯ್ಕೆ ಮಾಡಲಾದ 218 ಕ್ಕೂ ಹೆಚ್ಚು ಸಹಕಾರ ಮಾರಾಟ ಮಳಿಗೆಗಳು ಮತ್ತು ರಾಜಧಾನಿ ಚೆನ್ನೈನಲ್ಲಿ 4 ಮೊಬೈಲ್ ವಾಹನಗಳ ಮೂಲಕ ವಿತರಣೆ.

Sponsored

ಯೋಜನೆಯ ಹಿನ್ನೆಲೆ ಮತ್ತು ವಿಶೇಷತೆಗಳು:
​ಹಬ್ಬದ ದರ ಏರಿಕೆಗೆ ಕಡಿವಾಣ: ದೀಪಾವಳಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ, ವಿಪರೀತ ಬೆಲೆ ಏರಿಕೆಯಾಗುವುದರಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಸಬ್ಸಿಡಿ ದರದಲ್ಲಿ ಈ ಕಿಟ್‌ಗಳನ್ನು ಒದಗಿಸುತ್ತಿದೆ.
​
ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಹಬ್ಬದ ಸಂದರ್ಭದಲ್ಲಿ ವಿಜಯ್ ಸರ್ಕಾರದ ರಿಯಾಯಿತಿ ತರಕಾರಿ ಕಿಟ್‌ ಯೋಜನೆಯು ಅತ್ಯಂತ ನೆಮ್ಮದಿ ಹಾಗೂ ಸಮಾಧಾನ ತಂದಿದೆ ಎಂದು ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement
Advertisement
Advertisement
Advertisement
Advertisement