ಮಂಗಳವಾರ, 3 ನವೆಂಬರ್ 2026

ಹೊಂಡಮಯವಾಗಿರುವ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ಡಾಮರು ಕಾಮಗಾರಿಗೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

Advertisement
Advertisement

ಉಪ್ಪಿನಂಗಡಿ: ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿ ಸಂಚಾರಕ್ಕೆ ಅಯೋಗ್ಯವಾಗಿರುವ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಎಸ್‌ ಡಿಪಿಐ ವತಿಯಿಂದ ನ.2ರಂದು ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಯಿತು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಲೋನ್ಸೆ ಫ್ರಾಂಕ್ ಮಾತನಾಡಿ, ಇಲ್ಲಿನ ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್ ಸರಕಾರದ ರಾಜಕೀಯ ಕೆಸರಾಟದಿಂದಾಗಿ ಜನಸಾಮಾನ್ಯರು ನರಕ ಯಾತನೆ ಅನುಭವಿಸುವಂತಾಗಿದೆ. ಶೀಘ್ರವೇ ಈ ರಸ್ತೆಗೆ ಸಂಪೂರ್ಣ ಡಾಮರು ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

Sponsored

ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೊಡ್ರಿಗಸ್ ಮಾತನಾಡಿ, ಕಳೆದ ಐದು ವರ್ಷಗಳಿಂದ ರಸ್ತೆಯ ಈ ದುಸ್ಥಿತಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿವೆ. ಲಕ್ಷಾಂತರ ರೂ. ಬೆಲೆ ಬಾಳುವ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಅದರ ಬಿಡಿಭಾಗಗಳು ಕಳಚಿ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರಕಾರಕ್ಕೆ ಅರಿವಿದ್ದರೂ ಯಾವುದೇ ಶಾಶ್ವತ ಪರಿಹಾರ ಕೈಗೊಳ್ಳದಿರುವುದು ಏಕೆ? ನಮಗೆ ತಾತ್ಕಾಲಿಕ ಪ್ಯಾಚ್ ವರ್ಕ್ ಬೇಡ.

Advertisement
Advertisement

ಸಂಪೂರ್ಣ ಪ್ರಮಾಣದ ಡಾಮರು ಕಾಮಗಾರಿ ಆಗಬೇಕು ಎಂದು ಆಗ್ರಹಿಸಿದರು. ಹಾಡಿನ ಮೂಲಕ ಬಿಜೆಪಿ ಶಾಸಕ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಗುಂಡಿಗಳಿಗೆ ಗಾಳ ಹಾಕಿ ಮೀನು ಹಿಡಿಯುವಂತೆ, ಶಾಸಕ ಹರೀಶ್ ಪೂಂಜ ಅವರು ಆಗಮಿಸಿ ಹೊಂಡ-ಗುಂಡಿಗಳನ್ನು ವೀಕ್ಷಿಸುವಂತೆ ಈ ಸಂದರ್ಭ ಪ್ರತಿಭಟನಾಕಾರರು ಅಣಕು ಪ್ರದರ್ಶನ ನಡೆಸಿದರು.

Advertisement

ಇದೇ ವೇಳೆ ಸಂಸದರ ಕಾರ್ಯವೈಖರಿಯನ್ನೂ ವ್ಯಂಗ್ಯವಾಡಿದ ಪ್ರತಿಭಟನಾಕಾರರು, ಸಂಸದರು ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ವಾಹನ ಚಾಲಕರು ಹಾಕುವ ಶಾಪ ಜನಪ್ರತಿನಿಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಜೆ 4ಗಂಟೆಯ ವೇಳೆಗೆ ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಸಹಾಯಕ ಎಂಜಿನಿಯ‌ರ್ ಗೋಪಾಲ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸರಕಾರಕ್ಕೆ ಇದನ್ನು ಕಳುಹಿಸಿ ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ವ್ಯಂಗ್ಯ ಪೋಸ್ಟರ್: ಹೊಂಡಮಯ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಅನುಭವಿಸುವ ಸಮಸ್ಯೆಗಳ ಕುರಿತು ವ್ಯಂಗ್ಯದ ರೀತಿಯಲ್ಲಿ ಚಿತ್ರಿಸಿ ಶಾಸಕ ಹರೀಶ್ ಪೂಂಜಾರ ಮತ್ತು ಅಶೋಕ್ ರೈ ಯವರ ಪೊಟೋ ಇದ್ದ ಪ್ಲೆಕ್ಸ್ ಗಳನ್ನು ಎಸ್ ಡಿಪಿಐಯು ಈ ರಸ್ತೆಗಳಲ್ಲಿ ಅಳವಡಿಸಿದೆ.

Advertisement
Advertisement