ಶನಿವಾರ, 24 ಅಕ್ಟೋಬರ್ 2026

Madikeri: ಮುಸ್ಲಿಂ ವ್ಯಕ್ತಿಯಿಂದ RSS ಕಾರ್ಯಕರ್ತರ ಮೇಲೆ ರಾಡ್‌ನಿಂದ ಹಲ್ಲೆ- ಸ್ಥಿತಿ ಗಂಭೀರ!!

Madikeri: RSS ಕಾರ್ಯಕರ್ತರ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ರಾಡ್‌ನಿಂದ (Rod) ಹಲ್ಲೆಗೈದಿದ್ದು, ಆತನ ಸ್ಥಿತಿ ಗಂಭೀರ ಆಗಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಭಜರಂಗ್ ಹಾಡು ಹಾಕಿದ್ದಕ್ಕೆ ಚಾಲಕ ಹಾಗೂ ಕಾರ್ಯಕರ್ತರ ಮೇಲೆ ಮುಸ್ಲಿಂ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿ ಆರೋಪಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಘಟನೆಯಿಂದಾಗಿ ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆ.

ಹಾಡು ಹಾಕಿದ್ದಕ್ಕೆ ವಾಹನ ತಡೆದು ಆರೋಪಿ ಗಲಾಟೆ ನಡೆಸಿದ್ದು, ಪರಿಣಾಮ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಘಟನೆಯಿಂದ ಮಡಿಕೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದು, ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.