ಶುಕ್ರವಾರ, 6 ನವೆಂಬರ್ 2026

ಪ್ರವಾಸಿ ಬಸ್‌ನಲ್ಲಿ ದಾವೂದ್‌ ಇಬ್ರಾಹಿಂ ಬರಹವಿದ್ದ ಖಾಸಗಿ ಬಸ್ಸು ಪತ್ತೆ, ತೀವ್ರ ವಿವಾದ

Image Credit: Udayvani
Advertisement
Advertisement

ಹಿಂದೂ ಸಂಘಟನೆಗಳ ಆಕ್ರೋಶ

Sponsored

ಚಿಕ್ಕಮಗಳೂರು: ದಾವೂದ್‌ ಇಬ್ರಾಹಿಂನನ್ನು ವೈಭವೀಕರಿಸುವ ಬರಹಗಳಿದ್ದ ಕೇರಳ ಮೂಲದ ಖಾಸಗಿ ಪ್ರವಾಸಿ ಬಸ್ಸೊಂದು ಪತ್ತೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ.

Advertisement
Advertisement

ಬಸ್ಸಿನ ಮೇಲೆ ದಾವೂದ್‌ ರೈಸ್‌ ಆಫ್‌ ಡೇ ಹಾಗೂ ಎಂಪರರ್‌ ಸ್ಟ್ರೈಕ್ಸ್‌ ಅಗೈನ್‌ ಸೇರಿದಂತೆ ದೇಶದ್ರೋಹಿ, ಅಪರಾಧ ಜಗತ್ತಿನ ವ್ಯಕ್ತಿಯನ್ನು ಹೀರೋ ಎಂದು ಬಿಂಬಿಸುವ ಪ್ರಚೋದನಕಾರಿ ಬರಹಗಳನ್ನು ಬರೆಯಲಾಗಿತ್ತು.

Advertisement

ಕೇರಳದಿಂದ ಬಂದ ಈ ಬಸ್‌ ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಬಂದಾಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಕ್ಷಣವೇ ಬಸ್ಸನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಬಸ್ಸನ್ನು ಹಾಗೂ ಅದರ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದ್ದಾರೆ.

ತಮಿಳುನಾಡಿನಿಂದ ಬಂದ ಬಸ್ಸೊಂದರ ಮೇಲೆಯೂ ಇದೇ ರೀತಿಯ ದಾವೂದ್‌ ಗ್ಯಾಂಗ್‌ ಬೆಂಬಲಿಸುವ ಬರಹದ ಕುರಿತು ಆರು ತಿಂಗಳ ಹಿಂದೆ ವರದಿಯಾಗಿತ್ತು. ಇದೀಗ ಕೇರಳ ಮೂಲದ ಬಸ್ಸಿನಲ್ಲಿಯೂ ಇದೇ ಇರೀತಿ ಮುಂದುವರಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement