ಶನಿವಾರ, 24 ಅಕ್ಟೋಬರ್ 2026

Current Bill: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ!!

Current Bill: ವಿದ್ಯುತ್‌ ಸರಬರಾಜು ಕಂಪನಿಗಳ ಆದಾಯದಲ್ಲಿನ ನಷ್ಟ ಸರಿದೂಗಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತೀ ಯೂನಿಟ್‌ಗೆ 56 ಪೈಸೆ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ 15 ಪೈಸೆಯನ್ನು ಹೆಚ್ಚಿಗೆ ಮಾಡಲಾಗಿದೆ. ಇದಕ್ಕೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದೆ

ಹೊಸ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ. 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದ್ರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಹಣದ ಕೊರತೆಯನ್ನ ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.