ಶನಿವಾರ, 24 ಅಕ್ಟೋಬರ್ 2026

LPG: ಗೃಹಬಳಕೆ LPG ಸಿಲಿಂಡರ್ ದರದಲ್ಲಿ 60ರೂ ಏರಿಕೆ!!

LPG: ಎಲ್ಪಿಜಿ ಗ್ರಾಹಕರಿಗೆ ಸರ್ಕಾರವು ದೊಡ್ಡ ಶಾಕ್ ನೀಡಿದ್ದು, ಗೃಹ ಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ₹60, ₹115ರೂ ನಷ್ಟು ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. 

ಹೌದು, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ದೇಶದಲ್ಲಿ ಸಿಲಿಂಡರ್ ದರ ಏರಿಕೆಯಾಗಿದೆ. ಗೃಹಬಳಕೆಯ ಸಿಲಿಂಡರ್ ದರದಲ್ಲಿ 60 ರೂಪಾಯಿ ಏರಿಕೆಯಾಗಿದ್ದು ಇದೀಗ ರಾಜ್ಯದಲ್ಲಿ 14ಕೆಜಿಯ LPG ಹೊಸ ದರ ₹915 ಆಗಿದೆ.  ವಾಣಿಜ್ಯ ಸಿಲಿಂಡರ್ ದರವೂ ₹115 ಏರಿಕೆಯಾಗಿದೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.

ಇದೇ ವೇಳೆ ಮಧ್ಯಪ್ರದೇಶದ ಯುದ್ಧದ ಪರಿಣಾಮದಿಂದ ದೇಶದಲ್ಲಿ ಅಡುಗೆ ಅನಿಲದ ಕೊರತೆ ಉಂಟಾಗಲಿದೆ ಎಂಬ ಆತಂಕ ದೇಶಾದ್ಯಂತ ಮನೆ ಮಾಡಿದೆ. ಆದರೆ ಇದು ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.