ಭಾನುವಾರ, 25 ಅಕ್ಟೋಬರ್ 2026
Trending

Schools Closed : ಇರಾನ್ ಯುದ್ದ ಎಫೆಕ್ಟ್ – ದೇಶದಾದ್ಯಂತ 15 ದಿನ ಶಾಲೆಗಳು ಬಂದ್!!

Schools Closed : ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು ಪ್ರಪಂಚದ ಹಲವು ದೇಶಗಳ ಮೇಲೆ ಭಾರಿ ಎಫೆಕ್ಟ್ ನೀಡಿವೆ. ಅದರಲ್ಲಿಯೂ ಪಾಕಿಸ್ತಾನಕ್ಕೆ ತುಸು ಹೆಚ್ಚು ಎಂದೆ ಹೇಳಬಹುದು. ಕೆಲವು ದಿನಗಳ ಹಿಂದಷ್ಟೇ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 55 ರೂಪಾಯಿ ಏರಿಕೆ ಮಾಡಿದ ಪಾಕಿಸ್ತಾನವು ಇದೀಗ ಆರ್ಥಿಕ ಸಂಕಷ್ಟದಿಂದಾಗಿ ದೇಶಾದ್ಯಂತ 15 ದಿನ ಶಾಲೆಗಳನ್ನು ಬಂದು ಮಾಡಲು ಸೂಚಿಸಿದೆ. 

Sponsored

ಯಸ್, ಪಾಕಿಸ್ತಾನದಲ್ಲಿ (Pakistan) ಇಂಧನ ಬಿಕ್ಕಟ್ಟು (Fuel Crisis) ಭಾರಿ ಪ್ರಮಾಣದಲ್ಲಿ ಉಂಟಾಗಿದ್ದು, ಅದರ ಕೊರತೆ ಎಷ್ಟು ಭೀಕರವಾಗಿದೆ ಎಂದರೆ, ಅನಿವಾರ್ಯವಾಗಿ ಶೆಹಬಾಜ್ ಸರ್ಕಾರವು (Shahbaz Government) ದೇಶದಾದ್ಯಂತ ಎರಡು ವಾರಗಳ ಕಾಲ ಶಾಲೆಗಳನ್ನು (School Holiday) ಮುಚ್ಚಲು ಆದೇಶಿಸಿದೆ. ವಾಹನಗಳಿಗೆ ಇಂಧನವಿಲ್ಲದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ತಲುಪಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದೇ ಅದಕ್ಕೆ ಕಾರಣ.

ಆದೇಶದಲ್ಲಿ ಏನಿದೆ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂಧನ ಬಳಕೆಯನ್ನು ಕಡಿಮೆ ಮಾಡಲು, ಮಾರ್ಚ್ 16 ರಿಂದ ಜಾರಿಗೆ ಬರುವಂತೆ ಎಲ್ಲಾ ಶಾಲೆಗಳಿಗೆ ಎರಡು ವಾರಗಳ ರಜೆ ಘೋಷಿಸಲಾಗಿದೆ. ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ತಕ್ಷಣದಿಂದಲೇ ಆನ್‌ಲೈನ್ ತರಗತಿಗಳಿಗೆ ಬದಲಾಗುವಂತೆ ಸೂಚಿಸಲಾಗಿದೆ.