ಸೋಮವಾರ, 26 ಅಕ್ಟೋಬರ್ 2026
Trending

Iran: ವಿಶ್ವದ ಅತಿ ದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೊದ ಮೇಲೆಯೇ ಇರಾನ್‌ ದಾಳಿ – ತೈಲ ಮಾರುಕಟ್ಟೆ ತತ್ತರ

Iran: ತನ್ನ ವಿರುದ್ಧ ಸೇನಿಸಲು ಅಮೆರಿಕ ಜೊತೆ ಕೈಜೋಡಿಸಿರುವ ಸೌದಿ ಅರೇಬಿಯಾದ(Saudi Arabia) ಸರ್ಕಾರಿ ತೈಲ ಕಂಪನಿ ಸೌದಿ ಅರಾಮ್ಕೊದ (Saudi Aramco) ಮೇಲೆಯೇ ಇರಾನ್‌ (Iran) ಡ್ರೋನ್‌ ದಾಳಿ ನಡೆಸಿದೆ

Sponsored

ಹೌದು, ಮಧ್ಯಪ್ರಾಚ್ಯದಲ್ಲಿ ಹೊತ್ತಿ ಊರುತ್ತಿರುವ ಯುದ್ಧದ ಬೆಂಕಿ ಈಗ ವಿಶ್ವದ ದೊಡ್ಡ ಆರ್ಥಿಕ ಮಾರುಕಟ್ಟೆ ಎನಿಸಿರುವ ತೈಲ ಕ್ಷೇತ್ರಕ್ಕೆ ತಗುಲಿದೆ. ಇದೀಗ ಜಗತ್ತಿನ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರವಾದ ಸೌದಿ ಅರೇಬಿಯಾದ ರಾಸ್ ತನುರಾ ಮೇಲೆ ಇರಾನ್​ ಭೀಕರ ಡ್ರೋನ್ ದಾಳಿ (Saudi Oil Refinery Attack) ನಡೆಸಿದ್ದು, ಇಡೀ ವಿಶ್ವವೇ ಈಗ ಇಂಧನ ಬಿಕ್ಕಟ್ಟಿನ ಭೀತಿಯಲ್ಲಿ ನಡುಗುವ ಆತಂಕ ಎದುರಾಗಿದೆ.

Advertisement
Advertisement

ಸೋಮವಾರದ ಡ್ರೋನ್ (Drone) ದಾಳಿಯ ನಂತರ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ಸೌದಿ ಅರಾಮ್ಕೊ ಮುಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಲ್ಫ್‌ ಕೊಲ್ಲಿಯಲ್ಲಿರುವ ರಾಸ್ ತನುರಾ ಕಾಂಪ್ಲೆಕ್ಸ್‌ ಮಧ್ಯಪ್ರಾಚ್ಯದ ಅತಿದೊಡ್ಡ ಸಂಸ್ಕರಣಾಗಾರಗಳ ಪೈಕಿ ಒಂದಾಗಿದ್ದು ಇದು ದಿನಕ್ಕೆ 550,000 ಬ್ಯಾರೆಲ್‌ಗಳ (bpd) ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಸೌದಿಯ ಕಚ್ಚಾ ತೈಲವನ್ನು ರಫ್ತು ಮಾಡುವ ಪ್ರಮುಖ ಟರ್ಮಿನಲ್‌ ಆಗಿಯೂ ಕೆಲಸ ಮಾಡುತ್ತದೆ. 

ಸೌದಿ ಅರಾಮ್ಕೊ ನಿರ್ವಹಿಸುವ ಈ ಬೃಹತ್ ಘಟಕವು ದಿನಕ್ಕೆ ಸುಮಾರು 5.5 ಲಕ್ಷ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ಮೂಲಗಳ ಪ್ರಕಾರ, ಇರಾನ್‌ನಿಂದ ಬಂದ ಡ್ರೋನ್‌ಗಳು ಏಕಾಏಕಿ ಸಂಸ್ಕರಣಾಗಾರದ ಮೇಲೆ ದಾಳಿ ಮಾಡಿವೆ. ಪರಿಣಾಮವಾಗಿ, ಅಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ದಾಳಿಯಿಂದ ಆಗಿರುವ ಹಾನಿಯ ಪ್ರಮಾಣವನ್ನು ಲೆಕ್ಕಹಾಕುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತೈಲ ಮಾರುಕಟ್ಟೆಯಲ್ಲಿ ಕಂಪನ ಈ ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈಗಾಗಲೇ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆ ಅಸ್ತವ್ಯಸ್ತಗೊಂಡಿದೆ. ಸಧ್ಯ ಡ್ರೋನ್‌ ದಾಳಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಘಟಕವನ್ನು ಮುಚ್ಚಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Advertisement