ಶನಿವಾರ, 24 ಅಕ್ಟೋಬರ್ 2026

Property : ವಿಜಯ್ – ರಶ್ಮಿಕಾ ಮಂದಣ್ಣ ಪೈಕಿ ಶ್ರೀಮಂತರು ಯಾರು?

Property : ನಟ ವಿಜಯ್​ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ರಶ್ಮಿಕ- ವಿಜಯ್ ದೇವರಕೊಂಡ ಮದುವೆ ಅತ್ಯಂತ ಪ್ರೈವೇಟ್ ಆಗಿ ನಡೆಯಲಿದೆ. ಇದೀಗ ಈ ಜೋಡಿಗಳ ಪೈಕಿ ಅತಿ ಶ್ರೀಮಂತರು ಯಾರು, ಇಬ್ಬರಲ್ಲಿ ಯಾರ ಬಳಿ ಹೆಚ್ಚು ಆಸ್ತಿ ಇದೆ ಎಂಬ ಚರ್ಚೆ ಒಂದು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ.

ವಿಜಯ್ ದೇವರಕೊಂಡ ಅವರು ಕಷ್ಟದಿಂದ ಸಿನಿಮಾ ರಂಗಕ್ಕೆ ಬಂದವರು. ಈಗ ಅವರು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಅವರ ಒಟ್ಟೂ ಆಸ್ತಿ 70 ಕೋಟಿ ರೂಪಾಯಿ ಎನ್ನಲಾಗಿದೆ. ಜುಬ್ಲಿ ಹಿಲ್ಸ್​​ನಲ್ಲಿ ವಿಜಯ್ 15 ಕೋಟಿ ರೂಪಾಯಿ ಬೆಲೆಯ ಮನೆ ಹೊಂದಿದ್ದಾರೆ. ಬಿಎಂಡ್ಬ್ಲ್ಯೂ 5 ಸೀರಿಸ್, ವೋಲ್ವೋ ಎಕ್ಸ್​​ಸಿ90, ರೇಂಜ್ ರೋವರ್ ರೀತಿಯ ಕಾರನ್ನು ಹೊಂದಿದ್ದಾರೆ. 

ವಿಜಯ್ ದೇವರಕೊಂಡ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿದ್ದಾರೆ. ಇದಕ್ಕೆ ‘ಏಷ್ಯನ್ ವಿಜಯ್ ದೇವರಕೊಂಡ’ ಅಥವಾ ಎವಿಡಿ ಎಂದು ಹೆಸರು. ವಿಜಯ್ ದೇವರಕೊಂಡ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅವರು ‘ಹೈದರಾಬಾದ್ ಬ್ಲ್ಯಾಕ್ ಹಾಕ್’ ಹೆಸರಿನ ವಾಲಿಬಾಲ್ ತಂಡ ಹೊಂದಿದ್ದಾರೆ. ವಿಜಯ್ ಅವರು ಸಿನಿಮಾಗೆ ದೊಡ್ಡ ಮೊತ್ತ ಪಡೆದುಕೊಳ್ಳುತ್ತಾರೆ. ಅವರು ಇನ್ಸ್​ಟಾಗ್ರಾಮ್​​ನಲ್ಲಿ ಕೊಲ್ಯಾಬ್ ಆಗಲು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. 

ಇನ್ನೂ ರಶ್ಮಿಕಾ ಅವರ ಒಟ್ಟೂ ಆಸ್ತಿ 60 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ ಎನ್ನಲಾಗಿದೆ. ಅವರು ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ಮನೆ ಹೊಂದಿದ್ದಾರೆ. ಅವರು ಪ್ರತಿ ಸಿನಿಮಾಗೆ 4 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.