ಸೋಮವಾರ, 26 ಅಕ್ಟೋಬರ್ 2026
Trending

Travel: ಈ ದೇಶ ಸುತ್ತಲು ಕೇವಲ 40 ನಿಮಿಷ ಸಾಕು! ಇದು ವಿಶ್ವದ ಅತ್ಯಂತ ಚಿಕ್ಕ ದೇಶ!!

Image Credit Source: Green Line Tours

Vatican City: ನೀವು ಜಗತ್ತಿನ ಎಷ್ಟೋ ಸ್ಥಳಗಳಿಗೆ ಭೇಟಿ ನೀಡಿರಬಹುದು. ಸಣ್ಣ, ದೊಡ್ಡದು ಹೀಗೆ ಹಲವಾರು. ಆದರೆ ನಿಮಗಿದು ಗೊತ್ತೇ ? ಕೇವಲ 30 ರಿಂದ 40 ನಿಮಿಷಗಳಲ್ಲಿ ಭೇಟಿ ನೀಡಬಹುದಾದ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದೆಂದು? ಈ ದೇಶದ ಹೆಸರು ವ್ಯಾಟಿಕನ್‌ ಸಿಟಿ (Vatican City)ಎಂದು. ಬನ್ನಿ ಇದರ ಬಗ್ಗೆ ತಿಳಿಯೋಣ.

Sponsored

ಯುರೋಪಿಯನ್ ಖಂಡದಲ್ಲಿರುವ ವ್ಯಾಟಿಕನ್ ವಿಶ್ವದ ಅತ್ಯಂತ ಚಿಕ್ಕ ದೇಶವಾಗಿದೆ. ಈ ದೇಶದ ವಿಸ್ತೀರ್ಣ ಕೇವಲ 44 ಹೆಕ್ಟೇರ್ ಅಂದರೆ ಸುಮಾರು 108 ಎಕರೆ. ಇಲ್ಲಿ ಈ ಜಗತ್ತು ಕನಸಿಗಿಂತ ಕಡಿಮೆಯಿಲ್ಲ. ಇಟಲಿಯ ರಾಜಧಾನಿ ರೋಮ್‌ನಲ್ಲಿರುವ ಈ ದೇಶದ ಜನಸಂಖ್ಯೆಯು 1000 ಕ್ಕಿಂತ ಕಡಿಮೆ. ರೋಮ್ ನಗರದಲ್ಲಿ ನೆಲೆಗೊಂಡಿರುವ ಈ ದೇಶದ ಭಾಷೆ ಲ್ಯಾಟಿನ್ ಆಗಿದೆ.

Advertisement
Advertisement

ವ್ಯಾಟಿಕನ್ ನಗರವು ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. ಅಲ್ಲಿ ಪೋಪ್ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಚರ್ಚ್‌ನ ನಾಯಕನ ನೆಲೆಯಾಗಿದೆ.

ನೀವು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್ ಬೆಸಿಲಿಕಾ ಚರ್ಚ್‌ ನೋಡಬಹುದು. ಇದನ್ನು ಇಟಾಲಿಯನ್ ಭಾಷೆಯಲ್ಲಿ ವ್ಯಾಟಿಕನ್‌ನಲ್ಲಿ ಬೆಸಿಲಿಕಾ ಡಿ ಸ್ಯಾನ್ ಪಿಯೆಟ್ರೋ ಎಂದು ಕರೆಯಲಾಗುತ್ತದೆ. ಕ್ಯಾಥೋಲಿಕ್ ಸಂಪ್ರದಾಯದ ಪ್ರಕಾರ, ಈ ದೊಡ್ಡ ಚರ್ಚ್ ಅನ್ನು ಸೇಂಟ್ ಪೀಟರ್ ಸಮಾಧಿ ಮಾಡಿದ ಸ್ಥಳವೆಂದು ಪರಿಗಣಿಸಲಾಗಿದೆ. ಸೇಂಟ್ ಪೀಟರ್ಸ್ ಬೆಸಿಲಿಕಾದ ಸಂಕೀರ್ಣದಲ್ಲಿ ಸುಮಾರು 100 ಸಮಾಧಿಗಳಿವೆ ಮತ್ತು ಈ ಸ್ಥಳವು ವಿಶೇಷವಾಗಿ ಯಾತ್ರಾ ಸ್ಥಳವಾಗಿ ಪ್ರಸಿದ್ಧವಾಗಿದೆ. ನೀವು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಈ ಸ್ಥಳಕ್ಕೆ ಬರಬಹುದು.

ಕ್ರಿಸ್‌ಮಸ್‌ ಸಮಯದಲ್ಲಿ ಇಲ್ಲಿನ ಸುಂದರ ನೋಟವನ್ನು ನೀವು ನೋಡಲೇ ಬೇಕು. ಬೇರೆ ಬೇರೆ ದೇಶಗಳ ಜನರು ಈ ಸಮಯದಲ್ಲಿ ಇಲ್ಲಿ ಬಂದು ಸೇರುತ್ತಾರೆ.

Advertisement