ಶನಿವಾರ, 7 ನವೆಂಬರ್ 2026

Divorce : ಡಿವೋರ್ಸ್ ಪಡೆದ ಮಗಳನ್ನು ಮೆರವಣಿಗೆ ಮಾಡಿ ಮನೆಗೆ ಕರೆದುಕೊಂಡ ನಿವೃತ್ತ ನ್ಯಾಯಾಧೀಶ!!

Advertisement
Advertisement

Divorce : ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಸಂಸಾರಗಳು ಹಾಳಾಗದಂತೆ ಅವುಗಳನ್ನು ಸರಿಪಡಿಸಿ ಮರಳಿ ಕಳುಹಿಸಿಕೊಡುವುದು ನ್ಯಾಯಾಧೀಶರ ಕರ್ತವ್ಯದಲ್ಲಿ ಒಂದು. ಆದರೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ. 

Sponsored

ನಿವೃತ್ತ ನ್ಯಾಯಾದೀಶ ಜ್ಞಾನೇಂದ್ರ ಕುಮಾರ್‌ರ ಮಗಳು ಪ್ರಣಿತಾ ವಸಿಷ್ಠ, ಭಾರತೀಯ ಸೇನೆಯ ಮೇಜರ್‌ ಒಬ್ಬರನ್ನು 2018ರಲ್ಲಿ ವಿವಾಹವಾಗಿದ್ದರು. ಆದರೆ ವರ್ಷ ಕಳೆದಂತೆ ಪ್ರಣೀತಾ ಸಂಸಾರಿಕ ಜೀವನ ಹದಗೆಡುತ್ತಾ ಬರುತ್ತಿತ್ತು. ಮಗು ಜನನದ ಬಳಿಕವೂ ಪರಿಸ್ಥಿತಿ ಸುಧಾರಿಸದಾಗ ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. 

Advertisement
Advertisement

ಶನಿವಾರ ತಮ್ಮಿಚ್ಛೆಯಂತೆ ಪ್ರಣೀತಾ ಅವರು ಡಿವೋರ್ಸ್ ಪಡೆದಿದ್ದಾರೆ. ಡಿವೋರ್ಸ್‌ ಪಡೆದ ಪ್ರಣೀತಾರನ್ನು ಪರಿವಾರದವರೆಲ್ಲಾ ಬ್ಯಾಂಡ್ ಬಾರಿಸುತ್ತಾ, ಕುಣಿಯುತ್ತಾ ಮೆರವಣಿಗೆಯೊಂದಿಗೆ ಮನೆಗೆ ಕರೆತಂದಿದ್ದಾರೆ. ‘ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ’ ಎಂದು ಬರೆದಿದ್ದ ಕಪ್ಪು ಟೀಶರ್ಟ್‌ ಅನ್ನು ಧರಿಸಿದ್ದ ತಂದೆ ಜ್ಞಾನೇಂದ್ರ ಅವರು ಹೂವಿನ ಹಾರದೊಂದಿಗೆ ಆಕೆಯನ್ನು ಬರಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Advertisement
Advertisement
Advertisement