ಭಾನುವಾರ, 25 ಅಕ್ಟೋಬರ್ 2026
Trending

Basmati Rice: ಭಾರತದಲ್ಲಿ ಬೆಳೆಯುವ ಈ ಪದಾರ್ಥ ಇಲ್ಲ ಅಂದ್ರೆ ಅಮೆರಿಕನ್ನರ ಜೀವನವೇ ನಡೆಯದು!!

Basmati Rice: ಪ್ರತಿಯೊಂದು ದೇಶವು ಯಾವುದಾರೊಂದು ವಿಚಾರಕ್ಕಾಗಿ, ವಸ್ತುವಿಗಾಗಿ, ಪದಾರ್ಥಕ್ಕಾಗಿ ಒಂದೊಂದು ದೇಶವನ್ನು ಅವಲಂಬಿಸಿ ಇರುತ್ತದೆ. ಕೊಳು -ಕೊಡುಗೆಯ ವ್ಯವಹಾರದ ಮುಖಾಂತರ, ಆಮದು ಮತ್ತು ರಫ್ತುವಿನ ಮುಖಾಂತರ ಅವುಗಳನ್ನು ಪೂರೈಕೆ ಮಾಡಿಕೊಳ್ಳುತ್ತದೆ. ಅಂತೆಯೇ ಅಮೆರಿಕ ಎಷ್ಟೇ ಮುಂದುವರೆದರು ಕೂಡ, ತನ್ನನ್ನು ದೊಡ್ಡಣ್ಣ ಎಂದು ಕರೆಸಿಕೊಂಡರೂ ಕೂಡ, ಭಾರತದಲ್ಲಿ ಬೆಳೆಯುವ ಈ ಒಂದು ವಸ್ತು ಇಲ್ಲ ಅಂದರೆ ಅಲ್ಲಿನ ಜನರ ಜೀವನವೇ ನಡೆಯುವುದಿಲ್ಲ.

Sponsored

ಭಾರತದಲ್ಲಿ ಬೆಳೆಯುವ ಒಂದು ವಸ್ತು ಇಲ್ಲದಿದ್ದರೆ ಅಮೆರಿಕನ್ನರ ಜೀವನವೇ ನಡೆಯುವುದಿಲ್ಲ. ಪ್ರತಿಯೊಬ್ಬ ಅಮೆರಿಕನ್ನರ ಮನೆಯಲ್ಲಿಯೂ ಕೂಡ ಈ ವಸ್ತು, ಪದಾರ್ಥ ಇದ್ದೇ ಇರುತ್ತದೆ. ಅದು ಇಲ್ಲದ ದಿನಗಳನ್ನು ಅವರು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆ ಪದಾರ್ತ ಬೇರೆ ಯಾವುದು ಅಲ್ಲ ಅದುವೇ ಬಾಸ್ಮತಿ ಅಕ್ಕಿ.

ಹೌದು, ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಬಾಸ್ಮತಿ ಅಕ್ಕಿ ಇಂದು ಅಮೆರಿಕಾದಲ್ಲೂ ಅತ್ಯಂತ ಹೆಚ್ಚು ಬಳಕೆಯಾಗುವ ಭಾರತೀಯ ಕೃಷಿ ಉತ್ಪನ್ನಗಳಲ್ಲಿ ಒಂದಾಗಿದೆ. ಪ್ರತಿಯೊಂದು ದೊಡ್ಡ ಸೂಪರ್ ಮಾರ್ಕೆಟ್‌ನಲ್ಲೂ ಬಾಸ್ಮತಿ ಅಕ್ಕಿ ಪ್ಯಾಕೆಟ್‌ಗಳು ಕಾಣಸಿಗುತ್ತವೆ. ಭಾರತೀಯರಷ್ಟೇ ಅಲ್ಲದೆ, ಅಮೆರಿಕನ್ನರೂ ಇದನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಿದ್ದಾರೆ.

ಬೇಯಿಸಿದ ನಂತರ ಈ ಅಕ್ಕಿಯ ಕಾಳುಗಳು ತಮ್ಮ ಗಾತ್ರಕ್ಕಿಂತ ಸುಮಾರು ಎರಡು ಪಟ್ಟು ಉದ್ದವಾಗುತ್ತವೆ ಮತ್ತು ಒಂದಕ್ಕೊಂದು ಅಂಟಿಕೊಳ್ಳದಿರುವುದು ಇದರ ಪ್ರಮುಖ ವಿಶೇಷತೆ. ಅಮೆರಿಕಾದಲ್ಲಿ ಬಾಸ್ಮತಿ ಅಕ್ಕಿಯನ್ನು ವಿಶೇಷವಾಗಿ ಬಿರಿಯಾನಿ, ಪುಲಾವ್, ಫ್ರೈಡ್ ರೈಸ್ ಹಾಗೂ ವಿವಿಧ ಸೈಡ್ ಡಿಶ್‌ಗಳಲ್ಲಿ ಬಳಸಲಾಗುತ್ತದೆ. ಭಾರತೀಯ ರೆಸ್ಟೋರೆಂಟ್‌ಗಳಷ್ಟೇ ಅಲ್ಲದೆ, ಅನೇಕ ಅಮೆರಿಕನ್ ಕುಟುಂಬಗಳಲ್ಲೂ ಬಾಸ್ಮತಿ ಅಕ್ಕಿ ಈಗ ಸಾಮಾನ್ಯ ಆಹಾರವಾಗಿಬಿಟ್ಟಿದೆ. ಆರೋಗ್ಯದ ದೃಷ್ಟಿಯಿಂದ ಅಮೆರಿಕದಲ್ಲಿ ಭಾರತದ ಬಾಸುಮತಿ ಅಕ್ಕಿಗೆ ತುಂಬಾ ಡಿಮ್ಯಾಂಡ್ ಇದೆ.

ಇನ್ನೂ ಭಾರತವು ಪ್ರತಿವರ್ಷ ಅಮೆರಿಕಾಗೆ ಸುಮಾರು 2.7 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ. ಇದರಿಂದ ಭಾರತೀಯ ಕೃಷಿಗೆ ವಿದೇಶಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಲಾಭ ದೊರಕುತ್ತಿದೆ. ವಿಶ್ವದ ಒಟ್ಟು ಬಾಸ್ಮತಿ ಅಕ್ಕಿ ಉತ್ಪಾದನೆಯಲ್ಲಿ 70% ಕ್ಕಿಂತ ಹೆಚ್ಚು ಪಾಲು ಭಾರತದ್ದೇ ಆಗಿದೆ. ಈ ಅಕ್ಕಿಯನ್ನು ಮುಖ್ಯವಾಗಿ ಹಿಮಾಲಯದ ತಪ್ಪಲಿನ ಪ್ರದೇಶಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.