ಭಾನುವಾರ, 25 ಅಕ್ಟೋಬರ್ 2026
Trending

Belthangady : SSLC ಪರೀಕ್ಷೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ 100 ಫಲಿತಾಂಶ!!

Belthangady : 2026 ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. 

Sponsored

100 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕು. ಪ್ರಾಪ್ತಿ ಎಂ ಗೌಡ 620 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ 6ನೇ ಸ್ಥಾನ, ಮಾ. ಅಭಿಲಾಷ್ ಬಾನಪ್ಪ ಗೌಡ್ರ 613 ಅಂಕಗಳೊAದಿಗೆ ಶಾಲೆಗೆ ದ್ವಿತೀಯ ಮತ್ತು ಕು. ಶರಣ್ಯ ಜೆ ಶೆಟ್ಟಿ 610 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಿಂಚನ ಬಿ 609, ಅನನ್ಯ ಆರ್ ಶೆಟ್ಟಿ 607, ದಿಯಾ ಎಂ ಕೋಟ್ಯಾನ್ 607, ಚರಿತ್ರ 606, ಕುಶನ್ ಪಿ 601, ಅಕ್ಷರ ಹರೀಶ್‌ ಶೆಟ್ಟಿ 600 ಅಂಕಗಳನ್ನು ಪಡೆದಿರುತ್ತಾರೆ.