ಶನಿವಾರ, 24 ಅಕ್ಟೋಬರ್ 2026

933 ಹುದ್ದೆಗಳಿಗೆ ಯುಪಿಎಸ್ಸಿ ಅರ್ಜಿ ಆಹ್ವಾನ

UPSC Recruitment-2023

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ-2026ಕ್ಕೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 933 ಹುದ್ದೆಗಳ ಭರ್ತಿ ಸಂಬಂಧ ಅಧಿ ಸೂಚನೆ ಹೊರಡಿಸಲಾಗಿದೆ.

ಆಡಳಿತಾತ್ಮಕ ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಫೆ. 4ರಿಂದ 24ರವರೆಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಇರುತ್ತದೆ. ಅರ್ಜಿ ಶುಲ್ಕ ಸೇರಿದಂತೆ ಇತರ ವಿವರಗಳಿಗಾಗಿ ವೆಬ್‌ಸೈಟ್ upsc.gov.in. ಪರಿಶೀಲಿಸಬಹುದಾಗಿದೆ.