ಶನಿವಾರ, 24 ಅಕ್ಟೋಬರ್ 2026

Sullia : ದ್ವಿತೀಯ PUC ಫಲಿತಾಂಶ – ಸುಳ್ಯ ರೋಟರಿ ವಿದ್ಯಾಸಂಸ್ಥೆಗೆ ವಿಜ್ಞಾನದಲ್ಲಿ ಶೇ.100 ವಾಣಿಜ್ಯದಲ್ಲಿ ಶೇ.98 ಫಲಿತಾಂಶ!!

Sullia: ಕರ್ನಾಟಕದ ದ್ವಿತೀಯ ಪಿಯುಸಿ (Karnataka 2nd PUC) ಫಲಿತಾಂಶ ಪ್ರಕಟಗೊಂಡಿದ್ದು, ಹಲವು ಕಾಲೇಜುಗಳು ಭರ್ಜರಿ ಸಾಧನೆ ಮಾಡಿವೆ. ಅಂತೆಯೇ ಸುಳ್ಯದ ರೋಟರಿ ವಿದ್ಯಾಸಂಸ್ಥೆ  ವಿಜ್ಞಾನ ವಿಭಾಗದಲ್ಲಿ ಶೇ.100 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98 ಫಲಿತಾಂಶ ಪಡೆದುಕೊಂಡಿದೆ.

ವಿಜ್ಞಾನದಲ್ಲಿ ಪರೀಕ್ಷೆ ಬರೆದ 68 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಯಶಸ್ವಿ ಪಿ. ಭಟ್ -579, ಕೃತಿ ಎ – 578, ಮೋಕ್ಷ ಕೆ.ಬಿ. 572 ಅತೀ ಹೆಚ್ಚು ಅಂಕ ಪಡೆದಿದ್ದಾರೆ. ವಾಣಿಜ್ಯದಲ್ಲಿ 61 ವಿದ್ಯಾರ್ಥಿ ಗಳಲ್ಲಿ 59 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆಶ್ಲೇಷ್ 580, ರಿಫಾ ಟಿ.ಎ. 580, ಟಿ. ನಿಧಿಯಾ ರಾಜ್ 580, ಝನಾಬತ್ ನಿಝಾ 580 ಅಂಕವನ್ನು ಗಳಿಸಿದ್ದಾರೆ.