ಶನಿವಾರ, 24 ಅಕ್ಟೋಬರ್ 2026

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ ಸಂತಸದ ಸುದ್ದಿ

ಕೊರೊನಾ ಕಾರಣಕ್ಕೆ 2021-22 ನೇ ಸಾಲಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಪದ್ಧತಿಯನ್ನು ಎಲ್ಲ ವಿಷಯಗಳಿಗೆ ವಿಸ್ತರಿಸಲಾಗಿದೆ.

ಈ ಮೊದಲು ನಾಲ್ಕು ವಿಷಯಗಳಿಗೆ ಮಾತ್ರ ಕ್ಯಾರಿ ಓವರ್ ಪದ್ಧತಿಯಿದ್ದು, ಇದನ್ನು ಎಲ್ಲ ವಿಷಯಗಳಿಗೆ ವಿಸ್ತರಿಸಲಾಗಿರುವ ಕಾರಣ ವಿದ್ಯಾರ್ಥಿಗಳು ಎಷ್ಟೇ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ ಸಹ ಮುಂದಿನ ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳಲಿದ್ದಾರೆ.

ಈ ನಿಯಮ 5 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ಅರೆಕಾಲಿಕ ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರೆಕಾಲಿಕ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ