ನವದೆಹಲಿ : 2021-22 ನೇ ಶೈಕ್ಷಣಿಕ ವರ್ಷದ 10 ನೇ ತರಗತಿ ಮತ್ತು 12 ನೇ ತರಗತಿಯ ಮೊದಲ ಸೆಮಿಸ್ಟರ್ ಫಲಿತಾಂಶಗಳನ್ನು ಫೆ.7 ರಂದು ಪ್ರಕಟಿಸಲಾಗುವುದು ಎಂದು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಶುಕ್ರವಾರ ಪ್ರಕಟಿಸಿದೆ.
Sponsoredಈ ಕುರಿತು ಶಿಕ್ಷಣ ಮಂಡಳಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಐಸಿಎಸ್ ಐ ಮತ್ತು ಐಎಸ್ಸಿ ಫಲಿತಾಂಶಗಳ ಮೊದಲ ಅವಧಿಯ ಫಲಿತಾಂಶಗಳು ಪೋರ್ಟಲ್ ನಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹೊರಬರಲಿದೆ.
ಅಭ್ಯರ್ಥಿಗಳು ಎಸ್ ಎಂ ಎಸ್ ಮೂಲಕವೂ ತಮ್ಮ ಫಲಿತಾಂಶವನ್ನು ಪಡೆಯಬಹುದು.
ಆನ್ಲೈನ್ ನಲ್ಲಿ ನಿಮ್ಮ ಫಲಿತಾಂಶವನ್ನು ಹೇಗೆ ನೋಡುವುದು : ಅಭ್ಯರ್ಥಿಯು cise.org ವೆಬ್ಸೈಟ್ ಗೆ ಭೇಟಿ ನೀಡಬೇಕು ಅನಂತರ ಸೆಮಿಸ್ಟರ್ 1 ಬೋರ್ಡ್ ಫಲಿತಾಂಶಗಳು 2021-22 ಗಾಗಿ ಲಿಂಕ್ ಕ್ಲಿಕ್ ಮಾಡಬೇಕು. ನಂತರ ಅಪೇಕ್ಷಿತ ವರ್ಗವನ್ನು ಆಯ್ಕೆ ಮಾಡುವುದು ಅಂದರೆ ಐಸಿಎಸ್ ಇ ಅಥವಾ ಐಎಸ್ಸಿಯನ್ನು ಕ್ರಮವಾಗಿ 10 ನೇ ತರಗತಿ ಮತ್ತು 12 ನೇ ತರಗತಿಗೆ ಆಯ್ಕೆ ಮಾಡುವುದು. ನಂತರ ವಿದ್ಯಾರ್ಥಿಯು ತಮ್ಮ ವಿಶಿಷ್ಟ ಐಡಿ, ಇಂಡೆಕ್ಸ್ ನಂಬರನ್ನು ನಮೂದಿಸಬೇಕು. ಮತ್ತು ಫಲಿತಾಂಶವನ್ನು ಪ್ರವೇಶಿಸುವ ಸಮಯದಲ್ಲಿ ತೋರಿಸಲಾದ ಕ್ಯಾಪ್ಚಾ ಕೋಡ್ ನ್ನು ಭರ್ತಿ ಮಾಡಬೇಕು. ಆ ಬಳಿಕ ಫಲಿತಾಂಶವನ್ನು ನೋಡಬಹುದು.




