ಹಾವೇರಿಯ ಹಾನಗಲ್ಲದ ಪ್ರತಿಭಾವಂತ ವಿದ್ಯಾರ್ಥಿನಿ ಬಿಂದು ಶ್ರೀ ಪವಾರ ಅವರು ತಮ್ಮ ನೀಟ್ ರಿಸಲ್ಟ್ ನೋಡಿ ಶಾಕ್ ಆಗಿದ್ದಾರೆ. ಯಾಕೆಂದರೆ ಪರೀಕ್ಷೆಯಲ್ಲಿ 668 ಅಂಕ ನಿರೀಕ್ಷಿಸಿದ್ದ ಅವರಿಗೆ ಬಂದಿದ್ದು, ಕೇವಲ 11 ಅಂಕ!!

ಹೌದು, SSLCಯಲ್ಲಿ 98%, PUCಯಲ್ಲಿ 95%: ಬಿಂದುಶ್ರೀಗೆ ನೀಟ್‌ನಲ್ಲಿ ಬಂದಿದ್ದು 11 ಅಂಕ. ಅಷ್ಟೇ ಅಲ್ಲದೆ ತಮ್ಮ ಓಎಂಆರ್ ಶೀಟ್ ಬದಲಾಗಿದೆ ಮತ್ತು ಹೆಬ್ಬೆಟ್ಟಿನ ಗುರುತು ಹೊಂದಿಕೆಯಾಗುತ್ತಿಲ್ಲ ಎಂದು ಆರೋಪಿಸಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಂದು ಅವರು “ನೀಟ್ ಪರೀಕ್ಷೆಯಲ್ಲಿ ನಾನು ತುಂಬಿದ ಓಎಂಆರ್ ಸೀಟ್ ಅಂಕ ನನಗೆ ಬಂದಿಲ್ಲ. ನಾನು ವೆಬ್‌ಸೈಟ್‌ನಲ್ಲಿ ತರಿಸಿಕೊಂಡ ಓಎಂಆರ್ ಸೀಟ್ ನನ್ನದಲ್ಲವೇ ಅಲ್ಲ, ನಾನು ಪರೀಕ್ಷೆಗೆ ಹಾಜರಾದ ಸಮಯ, ಹೊರಬಂದ ಸಮಯ, ಓಎಂಆರ್ ಸೀಟ್‌ನಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೇ ನನ್ನ ಹೆಬ್ಬೆಟ್ಟಿನ ಗುರುತು ಕೂಡಾ ಓವರ್ ಲ್ಯಾಪ್ ಆಗಿದೆ. ನನಗೆ 720ಕ್ಕೆ ಕನಿಷ್ಠ 668 ಅಂಕ ಬರಲೇಬೇಕು, ಆದರೆ ಬಂದದ್ದು -11 ಅಂಕ ಇದು ನನ್ನ ಫಲಿತಾಂಶ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ಅವರಿಗೆ ಜು. 22ರಂದು ಈ ಓಎಂಆರ್ ಸೀಟ್ ನನ್ನದಲ್ಲ ಹಾಗೂ ಫಲಿತಾಂಶವೂ ನನ್ನದಲ್ಲ ಎಂದು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೆಲ್ಪಲೈನ್ ನಂಬರ್‌ಗೆ 1 ಸಾವಿರ ಬಾರಿ ಫೋನಾಯಿದ್ದರೂ ನನ್ನ ಪೋನ್ ಕರೆ ಸ್ವೀಕರಿಸಿಲ್ಲ. ಪರೀಕ್ಷಾ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆ, ಸತ್ಯವನ್ನು ಪರಿಶೀಲಿಸಿ ನನಗೆ ನ್ಯಾಯಕೊಡಿಸುತ್ತದೆ. ನನ್ನದೇ ಆದ ಓಎಂಆರ್ ಸೀಟ್ ನನಗೆ ಸಿಕ್ಕು 668 ಅಂಕ ಪಡೆದಿದ್ದು, ನನಗೆ ಬಯಸಿದ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ನಂಬಿಕೆಗೆ ಮೋಸವಾಗುದಿಲ್ಲ ಎಂಬ ಪೂರ್ಣವಿಶ್ವಾಸವಿದೆ. ಆದರೆ, ನ್ಯಾಯವೇ ಗೆಲ್ಲಬೇಕು ಎಂದು ಬಿಂದುಶ್ರೀ ಪವಾರ ತಿಳಿಸಿದ್ದಾರೆ.

