ಸುರತ್ಕಲ್: ವ್ಯಕ್ತಿ ಆತ್ಮಹತ್ಯೆ ಪ್ರಕರಣ: ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆ, ಪ್ರತಿಭಟನೆ ಅಂತ್ಯ
ಮಂಗಳೂರು: ಪೊಲೀಸ್ ವಿಚಾರಣೆಗೆ ಮನನೊಂದ ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಎದುರು ಮಂಗಳವಾರ ಸ್ಥಳೀಯರು ಮೃತದೇಹವಿಟ್ಟು ಪ್ರತಿಭಟನೆ ಮಾಡಿದರು.
Sponsoredಈ ಸಂದರ್ಭದಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನಾಕಾರರ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದು, ಪ್ರತಿಭಟನೆ ಅಂತ್ಯಗೊಂಡಿದೆ.
ಪ್ರತಿಭಟನೆಯಿಂದ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಸಂಚಾರ ವ್ಯತ್ಯಯವು ನಿವಾರಣೆಯಾಯಿತು.



