ಸೋಮವಾರ, 26 ಅಕ್ಟೋಬರ್ 2026
Trending

ಸುರತ್ಕಲ್‌: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ, ಡೆತ್‌ನೋಟ್‌ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆ*ತ್ಮ*ಹ*ತ್ಯೆ

ಮಂಗಳೂರು, ಜೂನ್‌ 24: ಸುರತ್ಕಲ್‌ ಠಾಣೆ ವ್ಯಾಪ್ತಿ ಕಾಟಿಪಳ್ಳದಲ್ಲಿ ಪಿಯುಸಿ ಮೊದಲ ವರ್ಷ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Sponsored

ಕಾಟಿಪಳ್ಳ 3ನೇ ಬ್ಲಾಕ್‌ ನಿವಾಸಿ ಸಂತೋಷ್‌ ಡಿಸೋಜ ಎನ್ನುವವರ ಪುತ್ರಿ ಮನಿಷಾ ಡಿಸೋಜ (17) ಸಾವಿಗೀಡಾದ ವಿದ್ಯಾರ್ಥಿನಿ. ಸ್ಥಳೀಯ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದ ನಂತರ ಡೆತ್‌ ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಈ ವೇಳೆ, ತಾಯಿ ಮನೆಯಲ್ಲಿಯೇ ಇದ್ದಿದ್ದು, ಹೊರಗಡೆ ಮನೆ ಕೆಲಸ ಮಾಡುತ್ತಿದ್ದರು.

Advertisement
Advertisement

ಡೆತ್‌ನೋಟ್‌ನಲ್ಲಿ, ನಾನು ತಪ್ಪು ಮಾಡಿದ್ದೇನೆ ಅಮ್ಮಾ, ನನ್ನ ತಪ್ಪನ್ನು ಮನ್ನಿಸಿ. ಇನ್ನು ಬದುಕಲು ಆಗುವುದಿಲ್ಲ. ನನಗೆ ಹಿಂದು ಸಂಘಟನೆಯವರು ಸಹಾಯ ಮಾಡಿಲ್ಲ. ನನಗೆ ಮೋಸ ಮಾಡಿದವ ಆರಾಮ ಇದ್ದಾನೆ. ನಾನು ನಂಬಿದವ ನನಗೆ ಕೈ ಕೊಟ್ಟಿದ್ದಾರೆ. ಸಂಘಟನೆಯಲ್ಲಿದ್ದೂ ನನಗೆ ಸಹಾಯ ಸಿಗಲಿಲ್ಲ. ನನ್ನ ರೀತಿ ಯಾರದ್ದೂ ಜೀವನ ಹಾಳಾಗಬಾರದು. ನನ್ನೊಂದಿಗೆ ದೈವ, ದೇವರು ಯಾರೂ ಇಲ್ಲ ಅಮ್ಮಾ, ಸಾರಿ ಅಮ್ಮಾ ಎಂದು ತುಳುವಿನಲ್ಲಿ ಬರೆದು ಸಾವಿಗೀಡಾಗಿದ್ದಾಳೆ

ಸ್ಥಳೀಯ ಯುವಕನೋರ್ವ ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ ಎನ್ನಲಾಗಿದೆ. ಕೃತ್ಯದ ಕುರಿತು ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸುರತ್ಕಲ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲು ಮಾಡಲಾಗಿದೆ.

Advertisement