ಸೋಮವಾರ, 26 ಅಕ್ಟೋಬರ್ 2026
Trending

ಪುತ್ತೂರು: ಜಿಮ್‌ ಟ್ರೈನರ್‌ ಕುಸಿದು ಬಿದ್ದು ಸಾವು!

ಪುತ್ತೂರು: ಜಿಮ್‌ ಟ್ರೈನರ್‌ ಸಚಿನ್‌ ರೈ ಅವರು ಸಾವಿಗೀಡಾಗಿರುವ ಘಟನೆ ನಡೆದಿದೆ. ಮೂಲತಃ ಮಡಂತ್ಯಾರ್‌ ನಿವಾಸಿ ಪ್ರಸ್ತುತ ಪುತ್ತೂರಿನ ಕಲ್ಲಿಮಾರ್‌ನಲ್ಲಿ ವಾಸವಿದ್ದ ಇವರು ಜಿಮ್‌ ಟ್ರೈನರ್‌ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ವರದಿಯಾಗಿದೆ.

Sponsored

ಇಂದು ಮುಂಜಾನೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಸಂಬಂಧ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.