ಸೋಮವಾರ, 26 ಅಕ್ಟೋಬರ್ 2026
Trending

ಮದುವೆ ಫೋಟೋ ತೆಗೆಯುತ್ತಿದ್ದಾಗ ಹಾರ್ಟ್‌ಅಟ್ಯಾಕ್‌, ಫೋಟೋಗ್ರಾಫರ್‌ ಕುಸಿದು ಬಿದ್ದು ಸಾವು

Heart Attack

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಫೋಟೋಗಳನ್ನು ತೆಗೆಯುತ್ತಿದ್ದ ಯುವ ಫೋಟೋಗ್ರಾಫ್‌ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Sponsored

ಬೊಮ್ಮನಹಳ್ಳಿ ಗ್ರಾಮದ ಮೂರ್ತಿ ಮೃತ ವ್ಯಕ್ತಿ.

ಮದುವೆ ಮಂಟಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಮೂರ್ತಿ ಕುಸಿದು ಬಿದ್ದಿದ್ದು, ಸಾವಿಗೀಡಾಗಿದ್ದಾರೆ. ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.