ಸೋಮವಾರ, 26 ಅಕ್ಟೋಬರ್ 2026
Trending

ಗಣಪತಿ ವಿಸರ್ಜನೆ – ಡಿಜೆ ಸೌಂಡಿಗೆ ತರಗತಿಯಲ್ಲೇ ಕುಸಿದುಬಿದ್ದು 2ನೇ ತರಗತಿ ವಿದ್ಯಾರ್ಥಿನಿ ಸಾ*ವು

2ನೇ ತರಗತಿ ವಿದ್ಯಾರ್ಥಿನಿ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಆಘಾತಕಾರಿ  ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

Sponsored

ಮೃತ ಬಾಲಕಿಯನ್ನು ವೈಷ್ಣವಿ ತಿವಾರಿ ಎಂದು ಗುರುತಿಸಲಾಗಿದ್ದು, ಶಾಲೆಯ ಬಳಿ ಸಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿದ್ದ ಅತಿಯಾದ ಡಿಜೆ (DJ) ಸದ್ದೇ ಆಕೆಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Advertisement
Advertisement

ತರಗತಿಗಳು ನಡೆಯುತ್ತಿದ್ದ ವೇಳೆ, ಶಾಲೆಯ ಪಕ್ಕದ ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿತ್ತು. ಈ ವೇಳೆ ಅತಿಯಾದ ಧ್ವನಿಯಲ್ಲಿ ಡಿಜೆ ಹಾಡುಗಳನ್ನು ಹಾಕಲಾಗಿತ್ತು ಎನ್ನಲಾಗಿದೆ. ತರಗತಿಯಲ್ಲಿ ಕುಳಿತಿದ್ದ ವೈಷ್ಣವಿ ಆ ಭಾರಿ ಸದ್ದಿನಿಂದ ತೀವ್ರ ಅಸ್ವಸ್ಥತೆಗೆ ಒಳಗಾಗಿ, ಬಳಿಕ ಕುಸಿದುಬಿದ್ದಿರುವುದು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಕ್ಷಣವೇ ಎಚ್ಚೆತ್ತ ಶಾಲೆಯ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ. 

ಘಟನೆ ಬಳಿಕ ಡಿಜೆ ಸಾಂಗ್ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಡಿಜೆಯನ್ನು ಬಂದ್ ಮಾಡಿಸಿದ್ದಾರೆ. ಆದರೆ ಆದರೆ ಬಾಲಕಿಯ ನಿಖರ ಸಾವಿಗೆ ವೈದ್ಯಕೀಯ ಕಾರಣವೇನು ಎಂಬುದು ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement