ಶನಿವಾರ, 24 ಅಕ್ಟೋಬರ್ 2026

ಕೊಪ್ಪಳ : ಕೋತಿ ತಳ್ಳಿದಕ್ಕೆ ಕೆಳಗೆ ಬಿದ್ದು ವೃದ್ಧೆ ಸಾವು!!

ಕೋತಿ ಕಚ್ಚಿ ಕೋತಿ ದಾಳಿ ಮಾಡಿ ಮನುಷ್ಯನು ಮೃತಪಟ್ಟಿರುವ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಒಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳದ ನಡೆದಿದೆ.

ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದರು. ಈ ವೇಳೆ ನಜಮುನಿಸಾ ಬೇಗಂ ಮೇಲೆ ಕೋತಿ ದಾಳಿ ನಡೆಸಿ ತಳ್ಳಿದೆ. ಈ ಪರಿಣಾಮ ನಜಮುನಿಸಾ ಬೇಗಂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನಜಮುನಿಸಾ ಅವರು ಕೆಳಗೆ ಬಿದ್ದಾಗ ಅವರನ್ನು ಎಬ್ಬಿಸಲು ಬಂದವರ ಮೇಲೆಯೂ ಕೋತಿ ದಾಳಿ ಮಾಡಿದೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.