ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ
ಮೂಡುಬಿದಿರೆ: ಬಿಜೆಪಿಯ ಯುವ ಮುಖಂಡ, ಕಿನ್ನಿಗೋಳಿ ನಿವಾಸಿ ಪ್ರತೀಕ್ ಶೆಟ್ಟಿ (40) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ತಡರಾತ್ರಿ ನಿಧನ ಹೊಂದಿದ್ದಾರೆ.
Sponsoredಮೂಲ್ಕಿ-ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಪ್ರತೀಕ್ ಶೆಟ್ಟಿ ಸಕ್ರಿಯರಾಗಿದ್ದು, ಹಲವು ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೂಡುಬಿದಿರೆ ಹಾಗೂ ಮೂಲ್ಕಿ ಜಿಲ್ಲಾ ಬಿಜೆಪಿಯಲ್ಲೂ ವಿವಿಧ ಪದಾಧಿಕಾರಿ ಜವಾಬ್ದಾರಿ ನಿರ್ವಹಿಸಿದ್ದರು.
ಇವರು ಪತ್ನಿ, ಪುತ್ರಿ ಸೇರಿ ಕುಟುಂಬದವರನ್ನು ಅಗಲಿದ್ದಾರೆ.



