ಶನಿವಾರ, 24 ಅಕ್ಟೋಬರ್ 2026

ಗುರುವಾಯನಕೆರೆ ಬಸ್‌ ನಿಲ್ದಾಣದ ಬಳಿ ವೃದ್ಧರೋರ್ವರ ಶವ ಪತ್ತೆ

Death News

ಬೆಳ್ತಂಗಡಿ: ಗುರುವಾಯನಕೆರೆ ಬಸ್‌ ನಿಲ್ದಾಣದ ಭೂಷಣ್‌ ಬಾರ್‌ ಎದುರುಗಡೆ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ಮರಿಯಪ್ಪ ಎಂದು ಪೊಲೀಸ್‌ ತನಿಖೆಯಿಂದ ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿ, ಪ್ರಕರಣಕ್ಕೆ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ವೃದ್ಧರ ಸಾವಿಗೆ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.