ಕಾಸರಗೋಡು: ಅಂಗನವಾಡಿಯ ಮುಂಭಾಗದಲ್ಲಿದ್ದ ಪತಾಕೆಯ ಕಂಬದಲ್ಲಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ.
Sponsoredಮಡಿಕೈ ಮುನ್ನು ರಸ್ತೆಯ ನಂದನ್‌ಕುಳಿ ಅಂಗನವಾಡಿಯ ಪರಿಸರದಲ್ಲಿ ಗುರುವಾರ ಸಂಜೆ 5 ಗಂಟೆಗೆ ರಾಜೇಶ್ ನೀತು ದಂಪತಿಯ ಪುತ್ರ ಅನೇಕ್ (11) ಎಂಬಾತನ ಕುತ್ತಿಗೆ ಆಕಸ್ಮಿಕವಾಗಿ ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಈತ ಕಾಂಞರಪೊಯಿಲ್ ಶಾಲೆಯ ಐದನೇ ತರಗಿಯ ವಿದ್ಯಾರ್ಥಿ.
Marriage AdSponsoredಬಾಲಕ ಪತಾಕೆಯ ಹಗ್ಗದಲ್ಲಿ ಬಿಗಿದ ಸ್ಥಿತಿಯಲ್ಲಿ ಸ್ಥಳೀಯರು ಕಂಡ ಕೂಡಲೇ ಆತನನ್ನು ಕಾಂಞಂಗಾಡ್‌ನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆಟ ಆಡುತ್ತಿರುವಾಗ ಹಗ್ಗ ಕುತ್ತಿಗೆಗೆ ಬಿಗಿದಿರಬಹುದು ಎಂದು ಶಂಕಿಸಲಾಗಿದೆ.



