ಮಧ್ಯಪ್ರದೇಶ, ಜು.04: ಏಳು ತಿಂಗಳ ಗರ್ಭಿಣಿಯನ್ನು ಕೊಲೆಗೈದ ಪತಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮಧ್ಯಪ್ರದೇಶದ ಹೈಕೋರ್ಟ್ ಏಳು ವರ್ಷಗಳವರೆಗೆ ಶಿಕ್ಷೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಇದೊಂದು ಕೊಲೆಯನ್ನು ಪೂರ್ವನಿಯೋಜಿತ ಎಂದು ಹೇಳಲಾಗಿತ್ತು. ಆದರೆ ನಿನ್ನಂತಹ ಸಾವಿರ ಗಂಡಂದಿರನ್ನು ನಾನು ಇಟ್ಟುಕೊಳ್ಳಬಲ್ಲೆ ಎನ್ನುವ ಪತ್ನಿಯ ಮಾತಿನಿಂದ ಪ್ರಚೋದನೆಗೊಳಗಾಗಿ ಹತ್ಯೆ ನಡೆದಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಪತಿಯ ಶಿಕ್ಷೆಯನ್ನು ಕಡಿತ ಮಾಡಿ ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ.
Sponsoredಹೆಂಡತಿ ಗಂಡನಿಗೆ ಈ ರೀತಿ ಹೇಳಿದಾಗ, ಅದು ಆತನ ನಿಷ್ಪ್ರಯೋಜಕತೆಯನ್ನು ಪರೋಕ್ಷವಾಗಿ ಬಿಂಬಿಸುತ್ತದೆ. ಇದನ್ನು ಹಠಾತ್ ಪ್ರಚೋದನೆ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.
2021 ರ ಸೆಪ್ಟೆಂಬರ್ 18 ರಂದು ತನ್ನ ಪತ್ನಿ ಕಿರಣ್ ಜೊತೆ ಶಿವ ಕಹಾರ್ ಜಗಳ ಮಾಡಿಕೊಂಡಿದ್ದ. ಜಗಳ ಜೋರಾದಾಗ, ನಿನ್ನಂಥ ಸಾವಿರ ಗಂಡಂದಿರನ್ನು ನಾನು ಹೊಂದಬಲ್ಲೆ ಎಂದು ಹೆಂಡತಿ ನಿಂದನೆ ಮಾಡಿದ್ದಳು. ಇದರಿಂದ ಕೋಪಗೊಂಡ ಶಿವ ಕಹಾರ್ ಕಲ್ಲನ್ನು ತೆಗೆದುಕೊಂಡು ಹೆಂಡತಿಯ ತಲೆಗೆ ಹೊಡೆದಿದ್ದು, ಪರಿಣಾಮ ಏಳು ತಿಂಗಳ ಗರ್ಭಿಣಿ ಕಿರಣ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಳು.
ಘಟನೆ ಬಳಿಕ ಆರೋಪಿ ಸ್ವತಃ ಮಾವನಿಗೆ ವಿಷಯ ತಿಳಿಸಿ, ಪೊಲೀಸರಿಗೂ ಶರಣಾಗಿದ್ದ.




